ಬೃಹತ್ ಮಟ್ಟದ ಅಂಗೈ ಲಿಂಗ ತಯಾರಿಸಿ ಬಸವ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ: ಮೇ.12:ಶರಣಪಡೆ ಲಿಂಗಾಯತ ಜಾಗರಣ ವೇದಿಕೆಯ ವತಿಯಿಂದ ನಗರದ ಎಸ್.ಎಸ್.ಹೈಸ್ಕೂಲ್ ಬಳಿ ಬಸವ ಜಯಂತಿ ಆಚರಿಸಲಾಯಿತು.
ಬೃಹತ್ ಮಟ್ಟದ ಅಂಗೈಲಿಂಗವನ್ನು ನಿರ್ಮಾಣ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಮಿಲಿಂದ ಚಂಚಲಕರ ಅವರ ಸಮ್ಮುಖದಲ್ಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷÀ ಕೆ.ಆರ್. ಕಡೇಚೂರ ಮಾತನಾಡಿ, ಈಶ್ವರ ಆತ್ಮ, ಗುಡಿಯಲಿಲ್ಲ. ಪಾಶಾನಕಲ್ಲುಗಳಿಗೆ ಚೇತನ ಇಲ್ಲ, ದೇಹ ದೇಗುಲದಲ್ಲಿಯೇ ಚೇತನ ಇದೆ. 12ನೇ ಶತಮಾನದಲ್ಲಿ ಬಸವಣ್ಣನವರು ಗುಡಿಯಿಂದ ದೇವರನ್ನು ದೇಹ ದೇಗುಲಕ್ಕೆ ತಂದರು. ದೇಹ ದೇಗುಲದಲ್ಲಿ ದೇವರಿದ್ದಾನೆ. ಚೇತನ ಪೂಜೆ ಮಾಡಬೇಕಾದರೆ ಅಂಗೈಯಲ್ಲಿ ಪ್ರತಿಯೊಬ್ಬರು ಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ, ಅನೀಲ ಹೊಸಮನಿ, ಚನ್ನು ಕಟ್ಟಿಮನಿ, ಬಸವರಾಜ ಕೊಂಡಗೂಳಿ, ನಿಂಗಪ್ಪ ಸಂಗಾಪೂರ, ಇತರರು ಇದ್ದರು.