ಕಾಂಗ್ರೆಸ್ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ
ವಿಜಯಪುರ,ಮೇ.11: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ‘ಬಸವ ಜಯಂತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿಗಳೂ ಹಾಗೂ ಮಾಜಿ ಶಾಸಕÀ ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಡಾ. ಗಂಗಾಧರ ಸಂಬಣ್ಣಿ, ರಾಮನಗೌಡ ಬಗಲಿ, ಸುಭಾಷ ಕಾಲೇಬಾಗ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಮೀರಾಸಾಬ ಮುಲ್ಲಾ, ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಎಂ.ಎಂ. ಮುಲ್ಲಾ, ದೇಸು ಚವ್ಹಾಣ, ಮಲ್ಲಿಕಾರ್ಜುನ ಪರಸಣ್ಣವರ, ಸಂತೋಷ ಬಾಲಗಾಂವಿ, ಅಬ್ದುಲ್‍ಪೀರಾ ಜಮಖಂಡಿ, ಅಜಿತ ಸಿಂಗೆ, ಡಾ. ಎಂ.ಆರ್. ಗುರಿಕಾರ, ಎ.ಆರ್. ಕಂಬಾಗಿ, ಗುಲಾಬ ಚವ್ಹಾಣ, ಮಹಾದೇವ ಜಾಧವ, ಸಣ್ಣಪ್ಪ ತಳವಾರ, ಪರಶುರಾಮ ಹೊಸಮನಿ, ಶಂಕರಸಿಂಗ್À ಹಜೇರಿ, ಅಕ್ಬರ್ ನದಾಫ್, ಬಿ.ಎಸ್. ಗಸ್ತಿ ಮುಂತಾದವರು ಉಪಸ್ಥಿತರಿದ್ದರು.