ಬಸವಣ್ಣನವರ ಕಾಯಕ ಸಿದ್ದಾಂತ ವಿಶ್ವಕ್ಕೆ ಮಾದರಿ ;ಭೃಂಗಿಮಠ
ವಿಜಯಪುರ,ಮೇ.11; ಭೃಂಗಿಮಠ ಕ್ರಿಯಾಥ್ಮಕ ವೇದಿಕೆ ಹಾಗೂ ಆಶಾಕಿರಣ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತಿ ಆಚರಿಸಲಾಯಿತು.
ಕಾಯಕ ನಿರತ ಚಮ್ಮಾರರು, ಕಂಬಾರರು, ಕ್ಷೌರಿಕರು, ಕಟ್ಟಡ ಕಾರ್ಮಿಕರು, ಅಟೋ ಚಾಲಕರು ಕಸ, ಪೌರ ಕಾರ್ಮಿಕರು ಸೇರಿದಂತೆÉ ಹಲವಾರು ಕಾಯಕ ಜೀವಿಗಳಿಗೆ ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ನೇತೃತ್ವ ವಹಿಸಿದ್ದ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ, ಶಿವನ ಆರಾಧಕರಾಗಿದ್ದ ಬಸವಣ್ಣನವರ ಕಾಯಕ ಸಿದ್ದಾಂತ ವಿಶ್ವಕ್ಕೆ ಮಾದರಿಯಾಗಿದೆ, ಬಸವಣ್ಣನವರು ವಿಜಯಪುರ ಜಿಲ್ಲೆಯಲ್ಲಿ ಜನಿಸಿದ್ದರು. ಬಸವಕಲ್ಯಾಣದಲ್ಲಿ ಬೆಳೆದರು. ಇಂದು ಹೈದರಾಬಾದ ಕರ್ನಾಠಕ ಪ್ರದೇಶ ನಾಮ ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಬದಲಿಸಿದ್ದು ಬಸವಣ್ಣನವರ ಆದÀರ್ಶದ ಮಹತ್ವ ಎತ್ತಿತೋರಿಸುತ್ತದೆ ಎಂದು ಹಿರಿಯ ನ್ಯಾಯವಾದಿ ಭೃಂಗಿಮಠ ಹೇಳಿದರು,
ಹಿರಿಯ ಮಹಿಳಾ ಸಮಾಜ ಸೇವಕಿ ಹಾಗೂ ಆಶಾಕಿರಣ ಸಂಸ್ಥೇಯ ಮುಖ್ಯಸ್ಥೆ ಮೀನಾಕ್ಷಿ ಉಟಗಿ, ಕರವೇ ಮುಖಂಡ ದಸ್ತಗೀರ ಸಾಲೋಟಗಿ ಅವರು ಮಾತನಾಡಿದರು.