ಸಮೃದ್ಧ ಸಮಾಜ ನಿರ್ಮಾಣಕ್ಕೆ ವಚನಗಳೆ ದಾರಿದೀಪ: ಅಟ್ಟೂರ
ಕಲಬುರಗಿ:ಮೇ.11:ಕನ್ನಡ ಭಾಷೆ ದೇವನಾಡುವ ಭಾಷೆ ಮಾಡಿದ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಿಶ್ವಗುರು ಸಾಂಸ್ಕøತಿಕ ನಾಯಕ ಬಸವಣ್ಣನವರ ಎಂದು ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಹೇಳಿದರು.
ಕಲಬುರ್ಗಿ ನಗರದ ಆಳಂದರಸ್ತೆಯಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಮ್ಮಿಕೊಂಡಿರುವ 891ನೇ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಶರಣರು ಮಾನವ ಕುಲವನ್ನಲ್ಲದೆ ಸಕಲ ಜೀವರಾಶಿಗಳನ್ನೇ ಒಳಿತನ್ನು ಬಯಸಿ ನುಡಿದಂತೆ ನಡೆದು ಅಮರರಾಗಿ ಉಳಿದಿದ್ದಾರೆ. ಜಯಂತಿ, ಉತ್ಸವಗಳು ಆಚರಣೆಯೊಂದಿಗೆ ಶರಣರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕತೆ ಜೀವನ ನಮ್ಮದಾಗುತ್ತದೆ. ಇಂದಿನ ವಿದ್ಯಾರ್ಥಿ ಯುವಕರು ಸಂದಿಗ್ಧ ಪರಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಿಡೀರನೆ ಶ್ರೀಮಂತರಾಗಬೇಕೆಂಬ ಹಂಬಲದಿಂದ ಅಪರಾಧ ಕ್ರಿಯೆಯಲ್ಲಿ ತೊಡಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಮ್ಮ ಜೀವನದ ಪಯಣ ಮುಕ್ತಾಯಗೊಳಿಸುತ್ತಿದ್ದಾರೆ ಇದನ್ನೆಲ್ಲಾ ಹೋಗಲಾಡಿಸಿ ಸಮೃದ್ಧ ಸಂಸ್ಕಾರದ ಸಮಾಜ ನಿರ್ಮಿಸಬೇಕಾದರೆ ಶರಣರ ವಚನಗಳು ನಮಗೆ ದಾರಿದೀಪವಾಗಿವೆ ಎಂದು ಹೇಳಿದರು. ವೇದಿಕೆಯ ಮೇಲೆ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಮುಖ್ಯಸ್ಥರಾದ ಅಸ್ಲಾಂ ಶೇಖ, ಶಿವಲಿಂಗಪ್ಪ ನಿಪ್ಪಾಣಿ, ರಘುನಂದನ ಕುಲಕರ್ಣಿ ಇದ್ದರು. ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಸಿಬ್ಬಂದಿಗಳು, ತರಬೇತಿದಾರರು ಭಾಗವಹಿಸಿದರು.