ಜೆ.ಡಿ.ಎಸ್.ಕಚೇರಿಯಲ್ಲಿ ವಿಶ್ವ ಗುರು ಸಾಂಸ್ಕøತಿಕ ನಾಯಕ ಬಸವಣ್ಣನವರ891 ನೇ ಜಯಂತಿ ಆಚರಣೆ
ಬೀದರ:ಮೇ.11: ಮೇ 10 ರಂದು ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ 891 ನೇ ಜಯಂತಿ ಜಿಲ್ಲಾ ಜೆ.ಡಿ.ಎಸ್. ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ ರವರು ಮುಂಜಾನೆ 9-00 ಗಂಟೆಗೆ ಮಹಾತ್ಮ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಕ್ಷದ ಪರಿಶಿಷ್ಟ ಘಟಕದ ಅಧ್ಯಕ್ಷರಾದ ದೇವೇಂದ್ರ ಸೋನಿ ಪೂಜೆ ಸಲ್ಲಿಸಿದರು. ಬೀದರ ಉತ್ತರ ಕ್ಷೇತ್ರದ ಅಧ್ಯಕ್ಷರಾದ ಬಸವರಾಜ ಪಾಟೀಲ ಹಾರೂರಗೇರಿ ರವರು ಮಹಾತ್ಮ ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಹಾಗೂ ಅವರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಹ್ಮದ ಅಸದೋದ್ದಿನ, ರಾಜಶೇಖರ ಜವಳೆ , ಸಂಗಮೇಶ ಚಿದ್ರಿ, ಪ್ರಶಾಂತ ವಿಶ್ವಕರ್ಮ , ಕೃಷ್ಣ ನಾಟೀಕರ , ಮಹ್ಮದ ಫಾರೂಖ ಅಲಿ ಸೇರಿದಂತೆ ಅನೇಕ ಮುಖಂಡರು ಈ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.