ವೈಭವದಿಂದ ನಡೆದ ಬಸವೇಶ್ವರ ರಥೋತ್ಸವ

ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮೇ.೧೧; ಬಸವ ಜಯಂತಿ ಅಂಗವಾಗಿ ಪಟ್ಟಣದಲ್ಲಿ  ಅಪಾರ ಭಕ್ತರ ಮಧ್ಯೆ ಅತ್ಯಂತ ವೈಭವದಿಂದ ಬಸವೇಶ್ವರ ರಥೋತ್ಸವ ಜರುಗಿತು.ಸ್ಥಳೀಯ ತೆಗ್ಗಿನಮಠ ದಿಂದ ಕೊಟ್ಟೂರು ರಸ್ತೆಯ ಮೂಲಕ ಪಿಕಾರ್ಡ ಬ್ಯಾಂಕ್ ವೃತ್ತದ ಆಂಜನೇಯ ದೇವಸ್ಥಾನದವರೆಗೂ ರಥ ಜರುಗಿತು. ಭಕ್ತರು ಬಾಳೆ ಹಣ್ಣು ತೂರಿ, ಟೆಂಗಿನ ಒಡೆದು ಭಕ್ತಿ ಸಮಪ್ರಿಸಿದರು.ಅಂಲಕೃತಗೊಂಡ 100ಕ್ಕೂ ಹೆಚ್ಚು ರಾಸುಗಳು ವಾಲ್ಮೀಕಿನಗರ, ಸೊಂಡೂರುಗೇರಿ, ಅಗಸನಕಟ್ಟೆ, ಮೇಗಳಪೇಟೆ, ಅಡವಿಹಳ್ಳಿ ಗ್ರಾಮ ಸೇರಿದಂತೆ ಪಟ್ಟಣದ ವಿವಿಧ ವಾರ್ಡಗಳಿಂದ ರೈತರು ಎತ್ತುಗಳೊಂದಿಗೆ ಸಕಲ ವಾದ್ಯಗಳ ಮೂಲಕ ಕೊಟ್ಟೂರು ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನದವರೆಗೂ ಆಗಮಿಸಿ ಪೂಜೆ ಸಲ್ಲಿಸಿದರು ರಾಸುಗಳು ರಥೋತ್ಸವದ ಮೆರವಣಿಗೆ ಕಳೆ ಕಟ್ಟಿದ್ದವು. ಎಚ್.ಎಂ.ಕೊಟ್ರೇಶ ಶ್ರೀಗಳು ರಥದಲ್ಲಿ ಆಸೀನರಾಗಿದ್ದರು.ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ಎಂ.ರಾಜಶೇಖರ, ಕಾರ್ಯದರ್ಶಿ ಟಿ.ಎಚ್ ಎಂ.ಮಲ್ಲಿಕಾರ್ಜುನ, ಸಾವಳಗಿ ಶಿವರಾಜ, ಸಾವಳಗಿ ಪ್ರಕಾಶ, ಎ.ಎಸ್ ಎಂ.ಗುರುಪ್ರಸಾದ್, ಟಿ.ಎಚ.ಎಂ. ಹೊಳಿಬಸಯ್ಯ, ಸಾವಳಗಿ ವಿಶ್ವನಾಥ, ಗಡಿ ಕೊಟ್ರೇಶ, ಎಚ್ .ಎಂ.ಮAಜುನಾಥ, ವಕೀಲ ಬಸವರಾಜ, ಮತ್ತಿತರ ಪ್ರಮುಖರು ರಥೋತ್ಸ,ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.