ಕಲ್ಲಳ್ಳಿ ನಾಗರಾಜ ನಿಧನಕ್ಕೆ ಎಸ್ ಎಸ್ – ಎಸ್ ಎಸ್ ಎಮ್ ಸಂತಾಪ

ದಾವಣಗೆರೆ.ಮೇ.೧೧ : ದಾವಣಗೆರೆ ಮಹಾನಗರ ಪಾಲಿಯ ಹಾಲಿ ಸದಸ್ಯರು ಹಾಗೂ ನಾಯಕ ಸಮಾಜದ ಮುಖಂಡರಾಗಿರುವ ಕಲ್ಲಳ್ಳಿ ನಾಗರಾಜ್ ಅವರ ನಿಧನಕ್ಕೆ ಮಾಜಿ ಸಚಿವರಾದ ಡಾ. ಶಾಮನೂರು ಶಿವಶಂಕರಪ್ಪನವರು, ಸಚಿವರಾದ ಎಸ್‌‌.ಎಸ್. ಮಲ್ಲಿಕಾರ್ಜುನ್ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ  ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ‌.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕಲ್ಲಳ್ಳಿ ನಾಗರಾಜ ಕಾಂಗ್ರೆಸ್ ಪಕ್ಷದಿಂದ ಶಾಮನೂರು ವಾರ್ಡಿನಲ್ಲಿ ಚುನಾಯಿತ ಹಾಲಿ ಸದಸ್ಯರಾಗಿದ್ದು ಉತ್ತಮ ಕೆಲಸ ಮಾಡಿರುವುದನ್ನು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಕಲ್ಲಳ್ಳಿ ನಾಗರಾಜ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಆಗಿರುವ ದುಃಖವನ್ನು ಆ ಭಗವಂತನು ಭರಿಸಲಿ ಎಂದು ಪ್ರಾರ್ಥಿಸಿದ್ದಾರೆ.