ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ
ಗುಳೇದಗುಡ್ಡ,ಮಾ.11: ಬಸವಣ್ಣ ಯಾವ ಜಾತಿ, ಧರ್ಮ, ಕುಲಕ್ಕೆ ಅಂಟದೇ ಅವೆಲ್ಲವನ್ನು ಮೀರಿ ನಮ್ಮ ಸಾಂಸ್ಕøತಿಕತೆ, ಪರಂಪರೆ, ತಲೆಮಾರನ್ನು ಹಾಗೂ ವ್ಯವಸ್ಥೆಯನ್ನು ಪ್ರತಿನಿಧಿಸುವ ಜೊತೆಗೆ ಅದನ್ನು ಜೀವಂತವಾಗಿಟ್ಟುಕೊಳ್ಳುವಂತ ವ್ಯಕ್ತಿತ್ವ ಬಸವಣ್ಣನವರದು. ಹೀಗಾಗಿಯೇ ಬಸವಣ್ಣ ನಮ್ಮ ಸಾಂಸ್ಕøತಿಕ ನಾಯಕ ಎಂದು ಡಾ. ವೀಣಾ ಕಲ್ಮಠ ಹೇಳಿದರು.
ಅವರು ಶೆಟ್ಟರ ಕಲ್ಯಾಣ ಮಂಟಪದಲ್ಲಿ ಬಸವ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಧರ್ಮಗುರು ಬಸವ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣ ಸಂಸ್ಕøತಿ, ವಚನ ಸಾಹಿತ್ಯವನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ಸತ್ಯ, ಶುದ್ಧ ಕಾಯಕ, ದಾಸೋಹದ ಪರಿಕಲ್ಪ ಮೂಡಿಸಿದ ಬಸವಣ್ಣವರ ಆದರ್ಶ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಬೇರೂರಿದ್ದ ಜಾತಿಯತೆ, ಮೌಡ್ಯತೆಯನ್ನು ವಚನಗಳ ಮೂಲಕ ಹೋಗಲಾಡಿಸಲು ಶ್ರಮಿಸಿದ ಬಸವಣ್ಣ ಕ್ರಾಂತಿಕಾರಿ. ಅನುಭವ ಮಂಟಪ ಕಟ್ಟಿ 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನ ಅವಕಾಶ ನೀಡಿದವರು ಬಸವಣ್ಣನವರು ಎಂದರು.
ಉಪನ್ಯಾಸಕ ಪ್ರೋ. ಎಸ್.ಐ. ರಾಜನಾಳ ಮಾತನಾಡಿದರು,
ಅಕ್ಕಮಹಾದೇವಿ ಮಠದ ಶರಣಮ್ಮತಾಯಿ ಸಾನಿಧ್ಯ ವಹಿಸಿದ್ದರು. ಎಚ್.ಎಸ್. ಹುಳ್ಳಪಲ್ಲೇದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ಗಿರೀಶ ನೀಲಕಂಠಮಠ ಅವರು ರಚಿಸಿದ ಇಷ್ಟಲಿಂಗ ಯೋಗ ದೃಶ್ಯ ಗೀತೆಯ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.
ಬಸವ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಇದಕ್ಕೂ ಮೊದಲು ಮುರುಗೇಶ ಶೇಖಾ, ಜಯಶ್ರೀ ಬರಗುಂಡಿ, ದಾನಮ್ಮ ಕುಂದರಗಿ ಅವರಿಂದ ಸಾಮೂಹಿಕ ಸಹಜ ಶಿವಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರೋ.ಸಿದ್ದಲಿಂಗಪ್ಪ ಬರಗುಂಡಿ, ಸಂಜಯ ಬರಗುಂಡಿ, ರವೀಂದ್ರ ಪಟ್ಟಣಶೆಟ್ಟಿ, ರಾಚಣ್ಣ ಕೆರೂರ, ರವಿ. ಅಂಗಡಿ, ಡಾ. ವಿ.ಎ.ಬೆನಕನಾಳ, ಪ್ರೊ. ಎಸ್.ಎಸ್. ನಾಯನೇಗಲಿ, ಮಹಾದೇವಯ್ಯ ನೀಲಕಂಠಮಠ, ಸುರೇಶ ರಾಜನಾಳ, ಮಲ್ಲಿಕಾರ್ಜುನ ಶೀಲವಂತ, ಶಿವಾನಂದ ಸಿಂದಗಿ, ಬಸವರಾಜ ಬರಗುಂಡಿ, ಕುಮಾರ ಶೆಟ್ಟರ, ಪುತ್ರಪ್ಪ ಬೀಳಗಿ, ಚೆನ್ನಪ್ಪ ಚಿಂದಿ, ಹುಚ್ಚೇಶ ಸಿಂದಗಿ, ಆರ್.ಎಸ್. ಜಿರ್ಲಿ, ಸಂಗಣ್ಣ ಚಿಕ್ಕಾಡಿ, ಬಸವರಾಜ ಚವಡಿ, ಎಂ.ಎಸ್. ಪಾಟೀಲ, ಶರಣಪ್ಪ ಚಿಕ್ಕನರಗುಂದ, ಮೋಹನ ಕರನಂದಿ, ಸುರೇಖಾ ಗೆದ್ದಲಮರಿ, ದ್ರಾಕ್ಷಾಯಣಿ ಹಿರೇಮಠ, ನಿರ್ಮಲಾ ಬರಗುಂಡಿ, ಮಾಲಾ ರಾಜನಾಳ ಮತ್ತಿತರರು ಪಾಲ್ಗೊಂಡಿದ್ದರು.