ಹೈವೇ ಬ್ರಿಡ್ಜ್ ಗೆ ಕಾರು ಡಿಕ್ಕಿ. ಓರ್ವ ಸಾವು, ಇಬ್ಬರಿಗೆ ಗಾಯ, ಮಾನವೀಯತೆ ಮೆರೆದ ಪ ಪಂ ಸದಸ್ಯ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.11 :- ಮಂಡ್ಯ ಜಿಲ್ಲೆಯ ಮದ್ದೂರು ಕಡೆಯಿಂದ ಗಂಗಾವತಿ ಕಡೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಹೈವೇ ಬ್ರಿಡ್ಜ್ ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಸಿಲುಕಿಕೊಂಡ ಮೂವರನ್ನು ಹೊರತೆಗೆದು ಕೂಡ್ಲಿಗಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮದ್ಯೆ ಓರ್ವ ಸಾವನ್ನಪ್ಪಿದ್ದು ಗಾಯಗೊಂಡ ಇನ್ನಿಬ್ಬರಿಗೆ ಕೂಡ್ಲಿಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ ಘಟನೆ ಇಂದು ನಸುಕಿನ ಜಾವ 12-45ಗಂಟೆಗೆ ಕೂಡ್ಲಿಗಿ ತಾಲೂಕಿನ ಅಮಲಾಪುರ – ಕ್ಯಾಸನಕೆರೆ ಮದ್ಯೆ ಹೈವೇ ರಸ್ತೆ 50ರಲ್ಲಿ ಜರುಗಿದೆ.
ಗಂಗಾವತಿ ಶಿವಾನಂದ (45) ಸಾವನ್ನಪ್ಪಿದ್ದು, ಗಂಗಾವತಿ ಸುರೇಶ (44) ಹಾಗೂ ಕಾರಿನ ಚಾಲಕ ಗಿಣಿಗೇರಾ  ಬಸವರಾಜ (50) ತೀವ್ರಗಾಯಗೊಂಡವರಾಗಿದ್ದು  ಇವರನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆ ವಿವರ :  ಮಂಡ್ಯ ಜಿಲ್ಲೆ ಮದ್ದೂರು ಕಡೆಯಿಂದ ಸ್ವಂತ ಊರಾದ ಗಂಗಾವತಿಗೆ ತೆರಳಲು ಟಾಟಾ ಯಾರಿಯರ್ ಕಾರಿನಲ್ಲಿ ಹೈವೇ 50ರ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಕೂಡ್ಲಿಗಿ ತಾಲೂಕಿನ ಅಮಲಾಪುರ – ಕ್ಯಾಸನಕೆರೆ ಮದ್ಯದಲ್ಲಿ ರಸ್ತೆ ವಿಭಜಕಕ್ಕೆ ನಿರ್ಮಾಣ ಮಾಡಲಾಗಿಡುವ ಹೈವೇ ಬ್ರಿಡ್ಜ್ ಗೆ ಕಾರಿನ ಚಾಲಕ ಬಸವರಾಜ ಚಾಲನೆಯ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನಲ್ಲಿದ್ದ ಚಾಲಕ ಬಸವರಾಜ ಸೇರಿ ಸುರೇಶ ಹಾಗೂ ಶಿವಾನಂದ ಎನ್ನುವವರಿದ್ದು ಕಾರಿನ ಡಿಕ್ಕಿಯಿಂದ ಶಿವಾನಂದ ಹಾಗೂ ಚಾಲಕ ಬಸವರಾಜ ಕಾರಿನಲ್ಲಿ ಸಿಲುಕಿಕೊಂಡಿದ್ದು ಅದೇ ಸಮಯದಲ್ಲಿ ಅಜ್ಜಿ ಊರಾದ ಬಣವಿಕಲ್ಲು ಗ್ರಾಮಕ್ಕೆ ಹೋಗಿ ಕೂಡ್ಲಿಗಿ ಕಡೆ ಬರುತ್ತಿದ್ದ ಪಟ್ಟಣ ಪಂಚಾಯತಿ ಸದಸ್ಯ ಕೆ ಹೆಚ್ ಎಂ ಸಚಿನಕುಮಾರ ಹಾಗೂ ಸಹೋದರ ವಿನಾಯಕ ಮತ್ತು ವೀರೇಶ ಎಂಬುವವರು ಕಾರಿನಲ್ಲಿ ಸುಲುಕಿದವರು ನರಳುವುದನ್ನು ಅರಿತು ತಮ್ಮ ಕಾರು ನಿಲ್ಲಿಸಿ ಸುಳಿಕಿದ ಮೂವರನ್ನು ಹೊರತೆಗೆದು ಅಷ್ಟರಲ್ಲಿ ಬಂದ ಅಂಬ್ಯುಲೆನ್ಸ್ ಗೆ ಗಾಯಳುಗಳನ್ನು ಕಳುಹಿಸಲಾಗಿದ್ದು ಮಾರ್ಗ ಮದ್ಯೆ ಶಿವಾನಂದ ಸಾವನ್ನಪ್ಪಿದ್ದಾನೆ ಮತ್ತು ಇನ್ನುಳಿದ ಇಬ್ಬರನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದಿದೆ.ಘಟನಾ ಸ್ಥಳಕ್ಕೆ ಹೊಸಹಳ್ಳಿ ಪಿಎಸ್ಐ ಹಾಗೂ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ  ಮೃತನ ಸಹೋದರ  ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಪ ಪಂ ಸದಸ್ಯ ಸಚಿನ್ ಹಾಗೂ  ಸಹೋದರರು : ಅಜ್ಜಿ ಊರು ಬಣವಿಕಲ್ಲು ಗ್ರಾಮದಿಂದ ಕಳೆದ ರಾತ್ರಿ ಕಾರಿನಲ್ಲಿ ಕೂಡ್ಲಿಗಿ ಕಡೆಗೆ  ಬರುತ್ತಿರುವಾಗ್ಗೆ,   ಹೈವೇ ಬ್ರಿಡ್ಜ್ ಗೆ ಮತ್ತೊಂದು  ಕಾರೊಂದು ಡಿಕ್ಕಿಯಾಗಿ ಅದರಲ್ಲಿದ್ದವರು ನರಳುವುದನ್ನು ಸೂಕ್ಷ್ಮವಾಗಿ ಗಮನಿಸಿದ ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯ ಕೆ ಹೆಚ್ ಎಂ ಸಚಿನಕುಮಾರ್ ಸಹೋದರ ವಿನಾಯಕ ಮತ್ತು ವೀರೇಶ ಅವರು ಕಾರು ನಿಲ್ಲಿಸಿ ಡಿಕ್ಕಿಯಾದ ಕಾರಿನ ಬಳಿ ಹೋದಾಗ ಕಾರಿನಲ್ಲಿದ್ದ ಮೂವರು  ಸುಲುಕಿದವರನ್ನು ಹೊರತೆಗೆದು ಕುಳ್ಳರಿಸಿ ಹೆದ್ದಾರಿ ಸಹಾಯಕರು NH 50 ಗ್ರೂಪ್ ನಲ್ಲಿ ಸಂದೇಶ ಹರಿಬಿಡಲಾಗಿ  ಅವರನ್ನು ತಕ್ಷಣ  ಹೈವೇ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸೇರಿ ಅಂಬ್ಯುಲೆನ್ಸ್ ಗಳು ಸ್ಥಳಕ್ಕೆ ಧಾವಿಸಿ ಗಾಯಳುಗಳನ್ನು ಕರೆದೋಯುವಾಗ ಮಾರ್ಗಮದ್ಯೆ ತೀವ್ರಗಾಯಗೊಂಡ ಶಿವಾನಂದ ಸಾವನ್ನಪ್ಪಿದ್ದಾನೆ ಉಳಿದಂತೆ ಇಬ್ಬರನ್ನು ಕೂಡ್ಲಿಗಿಯಿಂದ ಕೊಪ್ಪಳ ಆಸ್ಪತ್ರೆಗೆ ಕಳುಹಿಸಿ ಪ್ರಾಣ ಉಳಿಸಿ  ಮಾನವೀಯತೆ ಮೆರೆದಿದ್ದಾರೆ. ಗಾಯಳು ಹಾಗೂ ಗಾಯಳು ಕುಟುಂಬದ ಸದಸ್ಯರು ಹಾಗೂ ಪೊಲೀಸ್ ಇಲಾಖೆ ಕೂಡ್ಲಿಗಿ ಪ ಪಂ ಸದಸ್ಯ  ಸಚಿನ್ ಹಾಗೂ ವಿನಾಯಕ, ವೀರೇಶ ಅವರ ಮಾನವೀಯತೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ