ಈಶಾನ್ಯ ಪದವಿಧರ ಮತಕ್ಷೇತ್ರ ಈ ಭಾರಿ ಕಾಂಗ್ರೆಸ್ ಅವಕಾಶ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.11 : ಈಶಾನ್ಯ ಪದವಿಧರ ಮತಕ್ಷೇತ್ರದಲ್ಲಿ  ಕಾಂಗ್ರೆಸ್ ಸರ್ಕಾರದ ಪಕ್ಷದ ಸಾಧನೆ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತರಲಿದೆ ಎಂದು ಕೆಪಿಸಿಸಿ ಪದವಿ ಘಟಕದ ಸಂಘಟನಾ  ಕಾರ್ಯದರ್ಶಿ ಕೆ.ಬಿ.ಶ್ರೀನಿವಾಸರೆಡ್ಡಿ ಹೇಳಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲಾ ಹಂತದಲ್ಲಿಯು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಯುವ ಜನಾಂಗ, ಮಹಿಳೆಯರು, ನಿರುದ್ಯೋಗಿಗಳು ಪ್ರಯೋಜನ ಪಡೆಯುವಂತಾಗಿದ್ದು ನುಡಿದಂತೆ ನಡೆಯುತ್ತಿರುವ ಪ್ರಯುಕ್ತ ಈ ಬಾರಿ ಬಾರಿ ಪ್ರಮಾಣದ ಬೆಂಬಲ ಕಾಂಗ್ರೆಸ್ ಪರವಾಗಿ ಆಗಲಿದೆ ಎಂದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪದವಿಧರರು ನೊಂದಣಿಯಾಗಿದ್ದು ಇದು ಸಹ ಬದಲಾವಣೆಗೆ‌ ಸಹಕಾರಿಯಾಗಲಿದೆ‌ ಎಂದರು.
ಗೋಷ್ಠಿಯಲ್ಲಿ ಹೆಚ್ ಎನ್ ಎಫ್ ಇಮಾಮ್ ನಿಯಾಜಿ, ಎನ್. ರಾಮಕೃಷ್ಣ, ವಿರಾಂಜನೇಯ್ಯ, ಅನಂತಪದ್ಮನಾಭ, ವಿಜಯಕುಮಾರ, ವಿನಾಯಕ ಶೆಟ್ಟರ್ ಹಾಜರಿದ್ದರು.