ವಿಶ್ವಗುರು ಬಸವಣ್ಣನ ತತ್ವ ಪಾಲಿಸಿ
ಬೈಲಹೊಂಗಲ,ಮೇ.11 12ನೆಯ ಶತಮಾನದಲ್ಲಿ ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯತೆ, ಜಾತಿಯತೆ ತೊಡೆದು ಹಾಕಲು ಶ್ರಮಿಸಿದ ಸಮಾನತೆಯ ಹರಿಕಾರ ವಿಶ್ವ ಗುರು ಬಸವಣ್ಣನವರ ವಿಚಾರಗಳನ್ನು ಇಂದಿನ ಎಲ್ಲ ವರ್ಗದ ಸಮುದಾಯದವರು ಅರಿತು ಅನುಷ್ಠಾನಕ್ಕೆ ತಂದರೆ ಸಾಮಾಜಿಕ ಸುಧಾರಣೆ ಇನ್ನಷ್ಟು ಸಾಧ್ಯವಿದೆ' ಎಂದು ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು. ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಿಯಾಶೀಲ ಸ್ವಾಭಿಮಾನಿ ಗೆಳೆಯರ ಬಳಗದಿಂದ ನಡೆದ ವಿಶ್ವಗುರು ಬಸವೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಧರ್ಮಗಳ ನಡುವೆ ಅಶಾಂತಿ ಉಂಟಾಗುತ್ತಿದ್ದು, ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನ ತತ್ವ ಪಾಲಿಸಿದರೆ ಸಾಮರಸ್ಯದ ಜೀವನ ತಮ್ಮದಾಗಿಸಿಕೊಳ್ಳಬೇಕು’ ಎಂದರು.
ಧಾರ್ಮಿಕ ದತ್ತಿ ಇಲಾಖೆ ನಿರ್ದೆಶಕ ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಮಾತನಾಡಿ, `ಅಸಮಾನತೆಯಲ್ಲಿ ತೊಳಲಾಡುತ್ತಿದ್ದ ಸಮಾಜದಲ್ಲಿ ಸಮಾನತೆಯನ್ನು 12ನೇ ಶತಮಾನದಲ್ಲಿಯೇ ಸಾರಿದ ಕೀರ್ತಿ ಬಸವೇಶ್ವರಿಗೆ ಸಲ್ಲುತ್ತದೆ’ ಎಂದರು.
ಪತ್ರಕರ್ತ ಬಸವರಾಜ ಕಲಾದಗಿ ವೀರೇಶ ಹಲಕಿ ನಟ ಶಿವರಂಜನ ಬೋಳನ್ನವರ, ರಾಯಣ್ಣ ಸಮಿತಿ ಅಧ್ಯಕ್ಷ ಸೋಮನಾಥ ಸೊಪ್ಪಿಮಠ, ಮಹಾಂತೇಶ ಮತ್ತಿಕೊಪ್ಪ, ಗುರು ಮೆಟಗುಡ್ಡ, ಶಂಕರೆಪ್ಪ ಯಡಳ್ಳಿ, ಡಾ.ಮಹಾಂತೇಶ ಗದಗ, ಮಲ್ಲಿಕಾರ್ಜುನ ಉಳ್ಳೇಗಡ್ಡಿ, ಮಹೇಶ ಕೋಟಗಿ, ಶ್ರೀಶೈಲ ಶರಣಪ್ಪನವರ, ಸಂತೋಷ ಕೊಳವಿ, ಮಹಾಂತೇಶ ಅಕ್ಕಿ, ಎಸ್.ಎಂ.ಪಾಟೀಲ, ಅಜ್ಜಪ್ಪ ಅಂಗಡಿ, ಬಸವರಾಜ ತೋಟಗಿ, ಮಹಾಂತೇಶ ಜಿಗಜಿನ್ನಿ, ಮಲ್ಲಿಕಾರ್ಜುನ ಏಣಗಿಮಠ, ಗಂಗಾಧರ ಹುಲಕುಂದ, ಸುನೀಲ ಹಲಗಿ ಇದ್ದರು.
ಗೆಳೆಯರ ಬಳಗದ ಸದಸ್ಯರಾದ ಮಂಜುನಾಥ ಜ್ಯೋತಿ, ಈರಪ್ಪ ಕಾಡೇಶನವರ, ಈರಣ್ಣಾ ಮೇಲಿಕಟ್ಟಿ, ರವಿ ವನ್ನೂರ, ರಾಜು ದಳವಾಯಿ, ಸಂಗಮೇಶ ರೇಶ್ಮಿ, ಶರೀಫ ನದಾಫ, ರವಿ ಹುಲಕುಂದ, ಗುರು ಕಡತಾಳ, ಶಿವು ಬಿಸನಕೊಪ್ಪ, ಸಾಯಿನಾಥ ನಾಯ್ಕ ಬಸವೇಶ್ವರ ಪಾಲ್ಗೊಂಡಿದ್ದರು.