ಮಾಕಾಲೇಔಟ್‍ನಲ್ಲಿ ಬಸವೇಶ್ವರರ ಪಂಚಲೋಹದ ಪುತ್ಥಳಿ ಅನಾವರಣ
ಕಲಬುರಗಿ,ಮೇ 11: ನಗರದ ಜೇವರ್ಗಿ ಕಾಲೋನಿಯಲ್ಲಿ (ಎನ್‍ಜಿಓ ಕಾಲೋನಿ) ಮಾಕಾ ಲೇಔಟ್‍ನಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯ ವತಿಯಿಂದ ನೂತನ ಬಸವೇಶ್ವರ ಪಂಚಲೋಹದ ಪುತ್ಥಳಿಯ ಅನಾವರಣ ನೂತನ ಬಸವ ಮಂಟಪದ ಉದ್ಘಾಟನೆ ವಚನ ವಾಚನಾಲಯ ಉದ್ಘಾಟನೆ ಮತ್ತು ರಕ್ತದಾನ ಶಿಬಿರದ ಉದ್ಘಾಟನೆಯನ್ನು 891ನೆಯ ಬಸವ ಜಯಂತಿಯ ಅಂಗವಾಗಿ ನೆರವೇರಿಸಲಾಯಿತು. ಸೋಮಣ್ಣನಡಿಕಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು. ಉದ್ಯಮಿಡಾ .ಸಂಜೀವ್ ಎಲ್ ಗುಪ್ತ ರವರ ಧರ್ಮಪತ್ನಿ ಮಂಜುಳಾ ಸಂಜೀವ್ ಗುಪ್ತ ಅವರು ಬಸವ ಮಂಟಪವನ್ನು ಉದ್ಘಾಟಿಸಿದರು. ಶಾರದಾಮಣಿ ಪಾಟೀಲ್ ಅವರು ನೂತನ ಪಂಚಲೋಹದ ಬಸವೇಶ್ವರರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಪಿಡಿಎ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಬುರಾವ್ ಸೇರಿಕಾರ್ ವಚನ ವಾಚನಾಲಯವನ್ನು ಉದ್ಘಾಟಿಸಿದರು. ಶ್ರೀ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷಅಯ್ಯಣ್ಣ ನಂದಿ ಕಾರ್ಯದರ್ಶಿ ಪರಮೇಶ್ವರ ಶಟಕಾರ ಉತ್ಸವ ಸಮಿತಿಯ ಅಧ್ಯಕ್ಷ ಶಿವಕುಮಾರ ಧರ್ಮಗೊಂಡ ಕಾರ್ಯದರ್ಶಿ ಆದಪ್ಪ ಬಗಲಿ ಖಜಾಂಚಿ ಸಿದ್ದರಾಮ ವಾಲಿ ಹಿರಿಯರಾದ ಅಶೋಕ್ ಗೂಳಿ ಮಹಾಂತೇಶ್ ಕೊನ್ನೂರ್ ರವೀಂದ್ರ ಶಾಬಾದಿ ಸತೀಶ್ ಸಜ್ಜನ್ ಪ್ರಸನ್ನ ವಾಂಜರ ಕಡೆ ಹಣಮಂತರಾಯ ನೋಡಿ ಸಂಗಮೇಶ್ ಮುಲ್ಗೆ ಸುಭಾಷ್ ಎಕ್ಲೂರ್ ರಾಜು ಸಿನ್ನೂರ್ ಅಪ್ಪ ಸಾಹೇಬ್ ಪಾಟೀಲ್ ಅನಿಲ್ ಪೂಜಾರಿ ನಾಗರಾಜ್ ಕಾಮ ರಾಜ್ ಕಾಮ ಶಿವಾನಂದ್ ಡೊಮಿನಿಹಾಳ್ ವೀರೇಶ್ ಮಠ್ ಉಪಸ್ಥಿತರಿದ್ದರು