ಅಬಲೆಯರನ್ನು ಗೌರವಿಸೋಣ,  ಅತ್ಯಾಚಾರಿಗೆ ತಕ್ಕ ಶಿಕ್ಷೆ ಆಗ್ರಹಿಸಿ ಹಾಸನ ಚಲೋ
ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.11: ಸಂಸದ ಪ್ರಜ್ವಲ್ ತನ್ನ ಬಳಿಗೆ ಸಹಾಯ ಯಾಚಿಸಿ ಬಂದ ಹಾಸನ ಜಿಲ್ಲೆಯ ನೂರಾರು ಹೆಣ್ಣುಮಕ್ಕಳನ್ನು, ಅಧಿಕಾರ ಮತ್ತು ಸಾಂದರ್ಭಿಕ ಲಾಭ ಪಡೆದು ಲೈಂಗಿಕವಾಗಿ ಶೋಷಣೆ ಮಾಡಿರುವುದು ದುರ್ದೈವದ ವಿಚಾರ, ಇವತ್ತಿನ ಪುರುಷ ಪುಧಾನ ಮನಸ್ಮೃತಿಯ ಸಮಾಜದ ಕಾರಣದಿಂದಾಗಿ ಇದು ಸಾವಿರಾರು ಕುಟುಂಬಗಳಲ್ಲಿ ಅಸಹನ, ಸಿಟ್ಟು, ಆಕ್ರೋಶ, ದ್ವೇಷ ಮತ್ತು ಮತ್ತರಗಳನ್ನು ಹುಟ್ಟು ಹಾಕಿ ಸಂತ್ರಸ್ತ ಮಹಿಳೆಯರನ್ನು ತುಚ್ಛವಾಗಿ ಹಾಗು ಅವಹೇಳನಕಾರಿಯಾಗಿ ನೋಡುವ ಸಂದರ್ಭ ಒದಗಿಬರುವ ಅವಕಾಶ ಸೃಷ್ಟಿಸಿ ಸಾಮಾಜಿಕ ಶೋಭೆಗೆ ಕಾರಣವಾಗುವಂತಹ ವಿಚಾರ. ಇಂತಹ ನೀಚ ಕೃತ್ಯ ಎಸಿಗದವರಿಗೆ ಶಿಕ್ಷಗೆ ಆಗ್ರಹಿಸಿ ಹಾಸನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಆರ್.ಎಸ್ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಆಶಾ ವಿರೇಶ ಹೇಳಿದರು.
ನಗರದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪುಕರಣದಲ್ಲಿ ಜವಾಬ್ದಾರಿಯುತ ಸಂಸದ ಸ್ಥಾನದಲ್ಲಿರುವ ಪ್ರಜ್ವಲ್ ಸಹಾಯ ಕೋರಿ ಬಂದವರನ್ನು ಶೋಷಣೆ ಮಾಡಿರುವುದರಿಂದಾಗಿ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳು ಇಲ್ಲಿ ಬಲಿಪಶುಗಳಾಗಿದ್ದು, ಅವರದು ಯಾವುದ ತಪ್ಪಿರುವುದಿಲ್ಲ. ಇದನ್ನು ನಾಗರಿಕ ಸಮಾಜ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಂತ್ರಸ್ತ ಮಹಿಳೆಯರ ಕುಟುಂಬಸ್ಕರು, ಸಂಬಂಧಿಕರು ಮತ್ತು ಪರಿಚಯಸ್ಕರು ಸೇರಿದಂತೆ ಇಡೀ ಸಮಾಜ ಈ ಮಹಿಳೆಯರೊಂದಿಗೆ ನಿಂತು ಅವರಲ್ಲಿ ಧೈರ್ಯ ತುಂಬುವ ವಾತಾವರಣ ಸೃಷ್ಟಿಸಬೇಕು ಎಂದು ಕೆಆ‌ಎಸ್ ಪಕ್ಷ ಹಾಸನ ಜಿಲ್ಲೆಯ ಜನರನ್ನೂ ಒಳಗೊಂಡು ಇಡೀ ಕರ್ನಾಟಕ ಜನತೆಗೆ ಮನವಿ ಮಾಡುತ್ತದೆ. ಹಾಗೆಯೇ, ತನ್ನ ಜವಾಬ್ದಾರಿಯುತ ಸಂಸದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಅಸಹಾಯಕ ಹೆಣ್ಣು ಮಕ್ಕಳನ್ನು ಶೋಷಣೆಗೊಳಪಡಿಸಿದ್ದಲ್ಲದೆ, ವಿಡಿಯೋ ಮಾಡಿಕೊಂಡು ವಿಕೃತಿ ಮರದಿರುವ ಪ್ರಜ್ವಲ್ ರೇವಣ್ಣ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದರ ಮೂಲಕ ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿಯಾಗಲಿ, ಇತರರೇ ಆಗಲಿ ಇಂತಹ ಕೃತ್ಯಗಳನ್ನು ಎಸಗಲು ಆಗದಂತೆ ತಡೆಯೊಡ್ಡಬೇಕಾಗಿದೆ.
ಇದು ಕೇವಲ ರಾಜಕಾರಿಣಿಗಳು ಮಾತ್ರ ಒಳಗೊಂಡಿರುವ ವಿಚಾರ ಮಾತ್ರವಲ್ಲ, ಅಧಿಕಾರಿಗಳು ಮತ್ತು ಖಾಸಗಿ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವವರು ಕೂಡ ಇದೇ ರೀತಿ ಮಹಿಳೆಯರ ಮೇಲೆ ಶೋಷಣೆ ನಡೆಸುತ್ತಿದ್ದಾರ ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ನಡೆಯಬಾರದು ಮತ್ತು ನಾಡಿನ ಮಹಿಳೆಯರ ಸುರಕ್ಷತೆಯಿಂದ ಇರಬೇಕೆಂದರೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅತ್ಯಾಚಾರಿ ಮತ್ತು ಈ ಕೃತ್ಯಗಳಲ್ಲಿ ಸಹಕರಿಸಿದವರಿಗೆ ಹಾಗು ಈ ವಿಡಿಯೋಗಳನ್ನು ಹಾಗೆಯೇ ಅತ್ಯಾಚಾರಿ ಮತ್ತು ತನಿಖೆ
One attachment • Scanned by Gmail