ಕಾಯಕವೇ ಕೈಲಾಸವೆಂದು ಸಾರಿದ ಬಸವಣ್ಣ
(ಸಂಜೆವಾಣಿ ವಾರ್ತೆ)
ಬಳ್ಳಾರಿ :ಮೇ 11:  ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಜಾತಿ ಪದ್ಧತಿಯನ್ನು ತೊಡೆದು ಹಾಕಿ ಮೇಲು ಕೀಳು, ಜಾತಿ ಧರ್ಮ ಎಂಬ ವಿಷಮ ಘಟನೆಗಳಿಂದ ನೊಂದವರ ಪರವಾಗಿ ನಿಂತ ಮಹಾನುಭಾವ ಭಕ್ತಿ ಬಂಡಾರಿ ಬಸವಣ್ಣನವರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಹೇಳಿದ್ದಾರೆ.
ಅವರು ನಿನ್ನೆ ಪಕ್ಷದ ಕಚೇರಿಯಲ್ಲಿ ಬಸವೇಶ್ವರ ಜಯಂತಿ ಆಚರಿಸಿ  ಮಾತನಾಡುತ್ತಿದ್ದರು.
ಸಂದರ್ಭದಲ್ಲಿ, ಎಲ್ಲನಗೌಡ, ಬಸಪ್ಪ ರಾಮಾಂಜನೇಯಲು  ರಾಕೇಶ್ ಭವಾನಿ ರೇಣುಕಾ ರುಮಾನ ನಾಗವೇಣಿ  ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು