ಚಂದಾಪೂರ ಬಸವ ಅಭಿಮಾನಿಗಳಿಂದ ಬಸವ ಜಯಂತಿ
ಚಿಂಚೋಳಿ,ಏ.11- ಪಟ್ಟಣದ ಚಂದಾಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಸವ ಅಭಿಮಾನಿ ಬಳಗ ವತಿಯಿಂದ 891ನೇ ಬಸವ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಳಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕರಾದ ಡಾ. ಶಿವಶರಣಪ್ಪ ಮೋತಕಪಳ್ಳಿ, ಅವರು, ವಿಶ್ವಗುರು ಬಸವಣ್ಣನವರು ಇಡೀ ಕರ್ನಾಟಕ ದೇಶಕ್ಕೆಲ್ಲ ಶ್ರೀ ವಿಶ್ವಕ್ಕೆ ವಿಶ್ವಗುರು ಆಗಿದ್ದಾರೆ ಎಂದರು.
ಬಸವಣ್ಣನವರ ವಚನಗಳು, ಶರಣರ ಸಾಹಿತ್ಯವನ್ನು ನಾವೆಲ್ಲರೂ ಓದುವ ಅಭ್ಯಾಸವನ್ನು ಮಾಡಿಕೊಂಡು ಬಸವಣ್ಣರ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಸಿದ್ರಾಮೇಶ್ವರ ಸ್ವಾಮಿಗಳು ಬಸವ ಮಹಾಮನೆ, ಬಸವಕಲ್ಯಾಣ, ಬಸವ ಅಭಿಮಾನಿ ಬಳಗದ ಅಧ್ಯಕ್ಷರಾದ ವೀರೇಶ ಯಂಪಳ್ಳಿ, ಉಪಾಧ್ಯಕ್ಷರಾದ ಶಿವಕುಮಾರ ಜಾಬಶೆಟ್ಟಿ, ಬಸವರಾಜ ಚನ್ನೂರ್, ಸುರೇಶ ಸುಂಕದ, ಚೇತನ ಹೂಡದಳ್ಳಿ, ಕಾರ್ಯದರ್ಶಿಗಳಾದ ಸಂಪತ್ ಮುಸ್ಟರಿ, ಸಂಜುಕುಮಾರ ಯಂಪಳ್ಳಿ, ಲೋಕೇಶ ಶೇಳ್ಳಗಿ, ಮಂಜುನಾಥ ಸುನುಗಮಠ, ಖಜಂಚಿಯಾದ ಶಿವುಸ್ವಾಮಿ ಮಠ, ಮತ್ತು ಅನೇಕಬಸವ ಅಭಿಮಾನಿ ಬಳಗದ ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು