ಎಕ್ಸಲಂಟ್ ವಿದ್ಯಾರ್ಥಿ ರೇವಣ್ಣ ಜಿಲ್ಲಾ ಮಟ್ಟಕ್ಕೆ ಆಯ್ಕೆ
ವಿಜಯಪುರ,ಸೆ.22: ಇಲ್ಲಿನ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿ ರೇವಣ್ಣ ಡೊಣಗಿ 110 ಮೀಟರ್ ಹಡ್ರ್ಸ್‍ಲ್‍ನಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ತಿಕೋಟಾ ಎ.ಬಿ. ಜತ್ತಿ ಕಾಲೇಜಿನಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಗ್ರಾಮೀಣ ವಲಯ ತಾಲೂಕಿನ ವತಿಯಿಂದ ನಡೆದ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈ ಪ್ರತಿಭಾವಂತ ವಿದ್ಯಾರ್ಥಿ ಈಗಾಗಲೇ ಹಲವಾರು ವಿಶ್ವ ದಾಖಲೆ, ನ್ಯಾಷನಲ್ ಅವಾಡ್ರ್ಸ್, ಸ್ಟೇಟ್ ಅವಡ್ರ್ಸ್, ಕರ್ನಾಟಕ ಸರಕಾರದ ಬಾಳಗೌರವ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ ಪಡೆದಿದ್ದು, ಚಿತ್ರಕಲೆ, ಯೋಗ, ವೈಜ್ಞಾನಿಕ ಅಧ್ಯಯನ, ಓಟ ಮತ್ತಿತರ ಸ್ಪರ್ಧೆಯಲ್ಲಿ ಹೆಸರುವಾಸಿಯಾಗಿದ್ದಾನೆ.
ಈ ವಿದ್ಯಾರ್ಥಿಯ ಸಾಧನೆಗೆ ಎಕ್ಸಲೆಂಟ್ ಶಾಲೆಯ ಅಧ್ಯಕ್ಷ ಶಿವಾನಂದ ಕೆಲೂರ, ಉಪಾಧ್ಯಕ್ಷ ದಯಾನಂದ ಕೆಲೂರ, ಮುಖ್ಯಗುರು ರಾಮ ಸುಕ್ತೆ, ಶಿಕ್ಷಕ ಸಿಬ್ಬಂದಿ ರಮ್ಯಾ, ಬಸಮ್ಮ, ಹತ್ತಿಗೌಡರ, ಟಿಪ್ಪು, ಐಜಾಕ್, ಬಸವರಾಜ, ಶಿಂಧೆ, ಗುಳಗಿ, ಸುಸ್ಮಿತಾ, ದಾನಮ್ಮ, ಕಾಶಿನಾಥ, ಶ್ರೀಮಂತ ಡೊಣಗಿ, ಶಿವು ಕಲ್ಯಾಣಿ, ಜೆ.ಎಂ. ಬಿರಾದಾರ, ಪೆಂಡಾರಿ, ಕಾಖಂಡಕಿ ಮತ್ತಿತರರು ಅಭಿನಂದಿಸಿದ್ದಾರೆ.