ಅಣ್ಣನ ಪ್ರೀತಿ: ತಮ್ಮನ ಕೊಲೆ
ಕಲಬುರಗಿ,ಸೆ.22-ಅಣ್ಣನ ಪ್ರೀತಿಯ ವಿವಾದದಲ್ಲಿ ತಮ್ಮನ ಕೊಲೆಯಾಗಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ನಾಗನಹಳ್ಳಿ ನಿವಾಸಿ ಸುಮೀತ್ ಮಲ್ಲಾಬಾದಿ (18) ಕೊಲೆಯಾದ ಯುವಕ.
ಸುಮೀತ್ ಅವರ ಅಣ್ಣ ಸಚಿನ್ ನೆರೆ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇದನ್ನು ಸಹಿಸದ ಯುವತಿಯ ಸಹೋದರರು ಸುಮೀತ್ ಮನೆಗೆ ಬಂದು ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ತಿರುಗಿ ಚಾಕುವಿನಿಂದ ಇರಿದು ಸುಮೀತ್‍ನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇದ್ದ ಸುಮೀತ್ ಶುಕ್ರವಾರವಷ್ಟೇ ಕಲಬುರಗಿಗೆ ಬಂದಿದ್ದ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.