ಅಲಿಯಂಬರದಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ
ಬೀದರ್,ಸೆ 22: ತಾಲೂಕಿನ ಅಲಿಯಂಬರ ಗ್ರಾಮದ ಅಂಗನವಾಡಿ ಕೇಂದ್ರ-2ರಲ್ಲಿ ರಾಷ್ಟ್ರೀಯ ಪೆÇೀಷಣ ಮಾಸಾಚಾರಣೆ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಸಪ್ತಾಹ ಆಚರಿಸಲಾಯಿತು.
ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿಗರ್ಭಿಣಿ ಮಹಿಳೆಯರು ಅಪೌಷ್ಟಿಕತೆ ವಿರುದ್ಧ ಸಮರ ಸಾರಬೇಕಾದರೆ ಮೊದಲು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು, ಹೆಚ್ಚು ಹಣ್ಣು ತರಕಾರಿ ಸೇವಿಸಬೇಕು, ಕೆಲಸ ಮಾಡುತ್ತಿರಬೇಕು, ಚಿಂತೆಯಿಂದ ಮುಕ್ತರಾಗಿ ಹಸನ್ಮುಖಿಯಾಗಿರಬೇಕೆಂದರು.
ಅಲಿಯಂಬರ ಗ್ರಾಮದ ಸಾಮಾಜಿಕ ಚಿಂತಕ ಶಾಮರಾವ ಗಂಜೆ ಮಾತನಾಡಿ, ಗರ್ಭಿಣಿ ಮಹಿಳೆಯರು ಅಪೌಷ್ಟಿಕತೆಯ ವಿರುದ್ಧ ಸಮರ ಸಾರಲು ಅಂಗನವಾಡಿ ಶಿಕ್ಷಕಿಯರು ಆಶಾ ಕಾರ್ಯಕರ್ತೆಯರ ಸಲಹೆ ಪಡೆದು ಅವರು ಹೇಳಿದಂತೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಅಂಗನವಾಡಿ ಮೇಲ್ವಿಚಾರಕಿ ಬೇಬಿನಂದಾ ಮಾತನಾಡಿ, ಗರ್ಭಿಣಿ ಮಹಿಳೆಯರು ಊಟ ಮಾಡಿ ಮಲಗುತ್ತಾರೆ ಅದರಿಂದ ಅಪೌಷ್ಟಿಕತೆಯು ಎದ್ದು ಕಾಣುತ್ತಿದೆ ಅಪೌಷ್ಟಿಕತೆ ವಿರುದ್ಧ ಸಮರ ಸಾರಲು ಬರಿ ಮಾತಿಗಷ್ಟೇ ಸೀಮಿತವಾಗಿರಬಾರದು. ಮನೆಯಲ್ಲಿ ಮಿಕ್ಸರ್ ವಾಶಿಂಗ್ ಮಷಿನ್ ಇತ್ಯಾದಿ ಉಪಕರಣಗಳನ್ನು ಬಳಸದೆ ಆದಷ್ಟು ನಮ್ಮ ಕೈಯಿಂದ ಕೆಲಸ ಮಾಡಿದರೆ ವ್ಯಾಯಾಮ ಆಗುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ಜಿಲ್ಲಾಧ್ಯಕ್ಷ ಸಂಗಮೇಶ್ ಭಾವಿದೊಡ್ಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷÀ ರಿತೇಶ್ ಬಿರನಳ್ಳೆ,ಶಿವಕುಮಾರ್ ರಾಯಿಗುಂಡೆ ನಾಗ ಶೆಟ್ಟಿ ಬಾಬ್ ಶೆಟ್ಟೆ ಬಸವರಾಜ್ ಕುಂಬಾರ್ ಅಂಗನವಾಡಿಯ ಶಿಕ್ಷಕಿರಾದ ಸರಸ್ವತಿ ಸಾಧುರೆ ಶ್ರೀದೇವಿ ಜಮಾದರೆ ಕಾಶಮ್ಮ ಶಿವಶೆಟ್ಟೆ ನಾಗಮಣಿ ಸುಶೀಲಮ್ಮ ಸಂಗಮ ರೀಟ ಸಂತೋಷಿ ಜಗದೇವಿ ಸಹಾಯಕಿಯರು ಮಾದೇವಿ ರಿಕ್ಕೆ ಈರಮ್ಮ ಅಕ್ತರಬಿ ದೈವಶೀಲ ಶಂಕ್ರಮ್ಮಾ ಸೇರಿದಂತೆ ಮಕ್ಕಳು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇದೇ ವೇಳೆ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.