ಜಾರಕಿಹೊಳಿ ವಿರುದ್ಧ ದೊಡ್ಡ ಷಡ್ಯಂತ್ರ: ಯತ್ನಾಳ
ವಿಜಯಪುರ,ಸೆ.22:ರಮೇಶ ಜಾರಕಿಹೊಳಿ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ರಮೇಶ ಜಾರಕಿಹೊಳಿ ಬಗೆಗಿನ ಸಿಡಿ ಬಿಡುಗಡೆ ಮಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಡಿಕೆಶಿ ಕೈವಾಡವಿದೆ ಎಂದು ಜಾರಕಿಹೊಳಿಯವರಿಗೆ ಸಿಟ್ಡು ಇದೆ. ಅದು ಇನ್ನೂ ತಣ್ಣಾಗಾಗಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಎಂಬುವುದನ್ನು ನಾನು ಒಪ್ಪಲ್ಲ ಎಂದು ರಮೇಶ ಜಾರಕಿಹೊಳಿ ನೀಡಿದ ಹೇಳಿಕೆ ವಿಷಯದಲ್ಲಿ ಬಿಜೆಪಿ ನಾಯಕರೊಂದಿಗೆ ಯಾವುದೇ ರೀತಿ ಸಂಧಾನವಾಗಿಲ್ಲ. ವರಿಷ್ಠರು ನಮ್ಮ ವಿಚಾರದ ಬಗ್ಗೆ ಕೇಳಿದ್ಧಾರಷ್ಟೆ. ಜಾರಕಿಹೊಳಿ ನಿರ್ಧಾರಕ್ಕೆ ತಾನು ಬದ್ಧ ಎಂದರು.
ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ ಅವರು, ಮುನಿರತ್ನ ತಪ್ಪು ಮಾಡಿದ್ದು ಸಾಬೀತಾಗಬೇಕು. ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ವಿಚಾರದ ಆಡಿಯೋದ ಧ್ವನಿ ಪರೀಕ್ಷೆ ನಡೆಯಬೇಕು. ಆ ಧ್ವನಿ ಯಾರದ್ದು ಎಂದು ಗೊತ್ತಾಗಬೇಕು ಎಂದು ತಿಳಿಸಿದರು.
ಹನಿಟ್ರ್ಯಾಪ್‍ಗಾಗಿ ಎಚ್‍ಐವಿ ಮಹಿಳೆಯರನ್ನು ಬಳಕೆ ಮಾಡಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಅಕ್ಷಮ್ಯ ಅಪರಾಧ. ಇದೂ ಕೂಡಾ ಸಾಬೀತಾಗಬೇಕು. ಮುನಿರತ್ನ ಈ ವಿಷಯದಲ್ಲಿ ತಪ್ಪೆಸಗಿರುವುದು ಸಾಬೀತಾದರೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಎಂದರು.