ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲಂಟ್ ಸಾಧನೆ
ವಿಜಯಪುರ,ಸೆ.22:2024-25ನೇ ಸಾಲಿನ ತಿಕೋಟಾ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ತಿಕೋಟಾದ ಬಿ.ಎಲ್.ಡಿ.ಇ ಸಂಸ್ಥೆ ಆವರಣದಲ್ಲಿ ಜರುಗಿತು.
ಈ ಸ್ಫರ್ಧೆಯಲ್ಲಿ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಕುಮಾರ ಹನಮಂತ ಪಟ್ಟೆದ 400 ಮೀಟರ್ ಓಟದಲ್ಲಿ ಪ್ರಥಮ, ಚೇತನ ಆರ್. ಎತ್ತರ ಜಿಗಿತದಲ್ಲಿ ಪ್ರಥಮ, ಓಂ ಮಿಂಚನಾಳ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಮಕ್ಕಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಎನ್. ಕೆಲೂರ ಮತ್ತು ಮುಖ್ಯಗುರುಗಳಾದ ತುಳಜಾರಾಮ ಸುಕ್ತೆ ಹಾಗೂ ದೈಹಿಕ ಶಿಕ್ಷಕ ದೇವರಾಜ ಶಿಂಧೆ, ಸಂಗನಬಸವ ಗುಲಗಿ, ದಾನಮ್ಮ ವಾಲಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.