ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.11:- ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ಬಸವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ಜಿಲ್ಲಾ ಮತ್ತು ನಗರ ಬಿಜೆಪಿಯಿಂದ ಬಸವ ಜಯಂತಿ ಆಚರಿಸಲಾಯಿತು.
ಮುಖ್ಯ ಭಾಷಣಕಾರ ಪೆÇ್ರ.ಶಿವರಾಜಪ್ಪ ಮಾತನಾಡಿ, 12 ನೇ ಶತಮಾನದಲ್ಲೇ ಎಲ್ಲಾ ಧರ್ಮಗಳು ಒಂದೇ ಎಂಬುದನ್ನು ತೋರಿಸಿಕೊಟ್ಟವರು ಬಸವಣ್ಣನವರಾಗಿದ್ಧಾರೆ. ಎಲ್ಲಾ ಧರ್ಮದ ಆಚರಣೆಗೂ ಅವರು ಅವಕಾಶ ಕೊಟ್ಟಿದ್ದರು. ಮಾತ್ರವಲ್ಲದೆ ಆರ್ಥಿಕ ಸಂಪತ್ತು ಎಲ್ಲರ ಬಳಿಯೂ ಸಮಾನಾಗಿ ಇರಬೇಕೆಂದು ಬಯಸ್ಸಿದ್ದರು. ಒಬ್ಬ ಬಡವನು ನೆಮ್ಮದಿಯಿಂದ ಬದುಕೆಂದು ಬಯಸ್ಸಿದ್ದವರಾಗಿದ್ದರೆಂದು ಸ್ಮರಿಸಿದರು.
ಕೇವಲ ಪುಷ್ಪಾರ್ಚನೆ ಮಾಡಿ ನಾವು ಹೋದರೆ ಬಸವ ಜಯಂತಿ ಮುಗಿಯುವುದಿಲ್ಲ. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಪಕ್ಷ ಯಾವುದೇ ಇರಲಿ. ಒಳ್ಳೆ ಕೆಲಸ ಮಾಡಿದವರನ್ನು ಸಮಾಜ ಎಂದೆಂದಿಗೂ ನೆನೆಯುತ್ತದೆ. ಸಾಕಷ್ಟು ರಾಜಕಾರಣಿಗಳನ್ನು ನೋಡಿದ್ದೇನೆ. ಇದರಲ್ಲಿ ಅನೇಕ ಸಜ್ಜನ ರಾಜಕಾರಣಿಗಳು ಸಾಕಷ್ಟು ಸಮಾಜಕ್ಕೆ ಕೊಡುಗೆ ನೀಡಿದ್ದಾರೆಂದು ಹೇಳಿದರು.
ಬಸವ ಜಯಂತಿ ಕಾರ್ಯಕ್ರಮ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ಕೌಟಿಲ್ಯ ರಘು, ಮೈನಾರಿಟಿ ಅಧ್ಯಕ್ಷ ಅನಿಲ್ ಥಾಮಸ್, ಎನ್.ವಿ.ಪಣಿಶ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ರಘು, ಕೇಬಲ್ ಮಹೇಶ್, ಹೆಚ್.ಜಿ.ಗಿರಿಧರ್, ಮಹೇಶ್ ಮಟವಡಿ, ಕಿರಣ್ ಗೌಡ, ಬಾಲು, ವಕ್ತಾರ ವಸಂತಕುಮಾರ್, ಮಹೇಶ್ ರಾಜ್ ಅರಸ್, ಜೋಗಿ ಮಂಜು, ಮೈ ಪು ರಾಜೇಶ್, ರೇಣುಕಾ ರಾಜು, ಮೋನಿಕಾ, ರಾಕೇಶ್ ಗೌಡ, ಶೈಲೆಂದ್ರ ಮುಂತಾದವರು ಭಾಗವಹಿಸಿದ್ದರು.