ಕಾವೇರಿ ಸಮಿತಿಯಿಂದ ಬಸವ ಪ್ರತಿಮೆಗೆ ಮಾಲಾರ್ಪಣೆ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.11:- ಕಾವೇರಿ ಕ್ರಿಯಾ ಸಮಿತಿ ವತಿಯಿಂದ ವಿಶ್ವ ಗುರು ಸಮಾನತಾವಾದಿ ಶ್ರೀ ಬಸವಣ್ಣನವರ ಜಯಂತಿಯನ್ನು ಅವರ ಪುತ್ತಳಿಗೆ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಸ್. ಜಯ ಪ್ರಕಾಶ್ ಪುಷ್ಪಾರ್ಚನೆಯನ್ನು ಮಾಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಬಸವಣ್ಣ ರವರು ಕಾಯಕ ನಿಷ್ಠೆಯನ್ನು ಸಾರಿದ ದಾರ್ಶನಿಕ. ಎಲ್ಲರನ್ನೂ ಸಮಾನವಾಗಿ ಕಂಡ ಮಹಾನ್ ಮಾನವತಾವಾದಿಯಾಗಿದ್ದಾರೆ. ದೇಹವನ್ನೇ ದೇಗುಲವನ್ನಾಗಿಸಿದ ಶರಣ ಭಕ್ತಿ ಭಂಡಾರಿಯಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ತೇಜೇಶ್ ಲೋಕೇಶ್ ಗೌಡ, ಮೈಸೂರು ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್ , ಪ್ರಮೀಳಾ, ಪೂರ್ಣಚಂದ್ರ ತೇಜಸ್ವಿ, ನಾಗರಾಜು , ಮಹೇಶ್ ಗೌಡ, ಮಹದೇವು, ಲಯನ್ ಶಂಕರ್ ಗುರು, ಪ್ರಭಾಕರ, ವಿಷ್ಣು, ಸಂಜಯ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.