ವಿಜೃಂಭಣೆಯ ಬಸವಣ್ಣನವರ ಜಯಂತಿ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣದ. ಮೇ.11:- ಪಿರಿಯಾಪಟ್ಟಣದ ಸಾರಿಗೆ ಘಟಕದಲ್ಲಿ ವಿಶ್ವಗುರು ಶ್ರೀ ಬಸವಣ್ಣನವರ ಜಯಂತಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಘಟಕ ವ್ಯವಸ್ಥಾಪಕರಾದ ದರ್ಶನ್ ರಾಮಚಂದ್ ಅವರ ನೇತೃತ್ವದಲ್ಲಿ ಚಾಲಕರು ನಿರ್ವಾಹಕರು ತಾಂತ್ರಿಕ ಸಿಬ್ಬಂದಿ ಹಾಗೂ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು, ಈ ವೇಳೆ ಘಟಕ ವ್ಯವಸ್ಥಾಪಕರಾದ ದರ್ಶನ್ ರಾಮಚಂದ್ ಹಾಗೂ ಚಾಲಕ ರವಿಶಂಕರ್ ಗುರೂಜಿ ಅವರು ಮಾತನಾಡಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಪಿಡುಗುಗಳನ್ನು ತಮ್ಮ ವಚನಗಳ ಮೂಲಕ ಆಡು ಭಾಷೆಯಲ್ಲಿ ಜನರಿಗೆ ಮನದಟ್ಟಾಗುವಂತೆ ತಿಳಿಸಿ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ಸಂತರು ಬಸವಣ್ಣ ಅವರಾಗಿದ್ದರು ಎಂದರು.
ಈ ವೇಳೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜೆ ಸಹ ಜರುಗಿ ಅನ್ನಸಂತರ್ಪಣೆ ಮಾಡಲಾಯಿತು, ಈ ಸಂದರ್ಭ ಸಹಾಯಕ ಸಂಚಾರ ಅಧೀಕ್ಷಕರಾದ ಪ್ರಕಾಶ್, ಲೆಕ್ಕ ಪತ್ರ ಮೇಲ್ವಿಚಾರಕಿ ಭಾಗ್ಯಲಕ್ಷ್ಮಿ, ಸಹಾಯಕ ಸಂಚಾರ ನಿರೀಕ್ಷಕ ಸುರೇಶ್, ಪಾರು ಪತ್ತೆಗಾರ ಪ್ರಕಾಶ್, ಸಂಚಾರ ನಿಯಂತ್ರಕ ಮಂಜುನಾಥ್, ಭದ್ರತಾ ಶಾಖೆಯ ನಂದೀಶ್ ಸೇರಿದಂತೆ ಚಾಲಕ ನಿರ್ವಾಹಕ ತಾಂತ್ರಿಕ ಹಾಗೂ ಕಚೇರಿ ಸಿಬ್ಬಂದಿ ಇದ್ದರು.