ಶನಿವಾರದಿಂದ ರಾಜಯೋಗ ರಿಟ್ರೀಟ್ ಸೆಂಟರ್‍ನಲ್ಲಿ ಆಧ್ಯಾತ್ಮಿಕ ಸಶಕ್ತೀಕರಣ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.11- ಮೈಸೂರು-ಹುಣಸೂರು ರಸ್ತೆಯಲ್ಲಿರುವ ಲಿಂಗದೇವರ ಕೊಪ್ಪಲಿನಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ರಿಟ್ರೀಟ್ ಸೆಂಟರ್‍ನಲ್ಲಿ ಇಂದಿನಿಂದ ಜುಲೈ 6 ರವರೆಗೆ 7 ತಂಡಗಳಲ್ಲಿ 2024 ಮೈಸೂರು ಸಬ್‍ಜೋನಿನ ವಾರ್ಷಿಕ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಸ್ವಚ್ಛ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಳ್ಳಲಾಗಿದೆ ಎಂದು ರಿಟ್ರೀಟ್ ಸೆಂಟರ್‍ನ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ಕ್ಯಾಲಿಕಟ್, ಕಣ್ಣೂರು, ಕೊಚಿನ್, ಜಿಲ್ಲೆಯ ಈಶ್ವರೀಯ ವಿಶ್ವವಿದ್ಯಾಲಯಗಳಲ್ಲಿ ನಿಯಮಿತವಾಗಿ ರಾಜಯೋಗ ಅಭ್ಯಾಸ ಮಾಡುವ ರಾಜಯೋಗ ವಿದ್ಯಾರ್ಥಿಗಳು, ರಾಜಯೋಗ ಶಿಕ್ಷಕಿಯರು ಮಾತ್ರ ಭಾಗವಹಿಸ ಬಹುದಾಗಿದೆ.
ಈ ಆಧ್ಯಾತ್ಮಿಕ ಸಶಕ್ತೀಕರಣವು, ಆಧ್ಯಾತ್ಮಿಕ ಸಂಪನ್ನತೆ ಮತ್ತು ಸಂಪೂರ್ಣತೆಯ ಜೀವನದ ವಿಷಯದ ಮೇಲೆ ಆಧಾರಿತವಾಗಿದೆ, ಎಂದು ತಿಳಿಸಿದ್ದಾರೆ.
ಮೌಂಟ್ ಅಭುವಿನಿಂದ ಆಗಮಿಸುವ ರಾಜಯೋಗ ವಿಷಯ ತಜ್ಞರುಗಳು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9448368019 ಇಲ್ಲವೆ 9945861666 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.