ಬಸ್ ಘಟಕದ ಸಿಬ್ಬಂದಿಗಳಿಂದ ಬಸವ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಔರಾದ : ಮೇ.11:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಔರಾದ ಘಟಕದ ವತಿಯಿಂದ ಪಟ್ಟಣದಲ್ಲಿ ರಾಜ್ಯದ ಸಾಂಸ್ಕøತಿಕ ನಾಯಕ ಜಗಜ್ಯೋತಿ ಬಸವಣ್ಣನವರ 891ನೇ ಜಯಂತಿ ಅದ್ದೂರಿಯಾಗಿ ಜರುಗಿತು.
ಬಸ್ ಘಟಕದ ಚಾಲಕರು, ನಿರ್ವಾಹಕರು, ಸಿಬ್ಬಂದಿಗಳು ಸೇರಿ ಘಟಕದಲ್ಲಿ ಪ್ರಸಾದ ವ್ಯವಸ್ಥೆ ಮಾಡಿ ಬಸ್ಸನ್ನು ಅಲಂಕಾರ ಗೊಳಿಸಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಘಟಕ ದಿಂದ ಬಸವೇಶ್ವರ ವೃತ್ತ ಮಾರ್ಗ ಬಸ್ಸ ನಿಲ್ದಾಣವರೆಗೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡಿಜೆ ಹಾಡಿನ ಮೇಲೆ ಕುಣಿದು ಕುಪ್ಪಳಿಸಿ ಮೇರವಣಿಗೆ ಯಶಸ್ವಿ ಗೊಳಿಸಿದರು.
ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕ ಸೂರ್ಯಕಾಂತ ರಾಠೋಡ, ಘಟಕ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಉಮಾಕಾಂತ ಮುಕ್ತೆದಾರ,ಗಣಪತಿ ಮುಧೋಳ, ಅಶೋಕ ಮಾನುರೆ,ಸಿದ್ರಾಮ ಬಳತೆ, ಧನರಾಜ ಎಕಲಾರ, ಅಶೋಕ ಭಾಲ್ಕೆ, ಧನರಾಜ ಬಳತೆ, ಧಮೇರ್ಂದ್ರ ಸಿಂಧೆ, ಸತೀಷ ಹಕ್ಯಾಳೆ, ವಿರೇಶ ಮಳ್ಳೆ, ಶಾಂತಕೂಮಾರ ಧನ್ನೂರ, ಘಟಕ ಇಸ್ಪೆಕ್ಟರ್ ಮೋಜಸ್ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಸವ ಜಯಂತಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
