ವಚನ ಸಾಹಿತ್ಯ ಪ್ರಮುಖ ಭಾಷೆಗಳಲ್ಲಿ ಅನುವಾದಗೊಂಡಲ್ಲಿ ಅಂತರಾಷ್ಟ್ರೀಯ ಅಧ್ಯಯನಕ್ಕೆ ಅನುಕೂಲ
ಕಲಬುರಗಿ,ಏ.10- ವಿಶ್ವಗುರು ಬಸವೇಶ್ವರರ ವಚನ ಸಾಹಿತ್ಯವನ್ನು ಪ್ರಮುಖ ಭಾಷೆಗಳಿಗೆ ಅನುವಾದಿಸಿ, ರಾಷ್ಟ್ರ ಮತ್ತು ಅಂತರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಅದ್ಯಾಯನ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಎಸ್.ಪಾಟೀಲ ಕೊಡಲಹಂಗರಗಾ ಅವರು ಒತ್ತಾಯಿಸಿದರು.
ಬಸವ ಜಯಂತಿ ಉತ್ಸವ ಸಮಿತಿ ಜ್ವಾನಯೋಗಿ ಸಿದ್ದೇಶ್ವರ ಸ್ವಾಮಿಜಿ ವೇದಿಕೆಯಲ್ಲಿ ಆಯೋಜಿಸಿದ್ದ 891ನೇ ಬಸವ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಮೌಡ್ಯತೆ, ಕಂದಾಚಾರ, ಮುಢನಂಬಿಕೆಗಳ ವಿರುದ್ದ ಕ್ರಾಂತಿ ಮಾಡಿದ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರ ಜೀವನ ಸಾಹಿತ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾಥಿಗಳು ಕಲಿಯುಂತಾಗಬೇಕು ಈ ನಿಟ್ಟಿನಲ್ಲಿ ಬಸವಣ್ಣವನರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಅವರ ಆದರ್ಶವನ್ನು ಮೈಗೊಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ವಿನೋದ ಪಾಟೀಲ ಸರಡಗಿ ಅವರು ವಹಿಸಿದ್ದರು. ಸೊನ್ನ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು, ಶ್ರೀನಿವಾಸ ಸರಡಗಿಯ ವೀರಭದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಪ್ರಾಧ್ಯಾಪಕರು ಮತ್ತು ಸಾಹಿತಿ ಡಾ.ಅರುಣ ಜೋಳದಕೊಡ್ಲಿಗಿ ಅವರು, ವಚನ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಸಕ ಬಸವರಾಜ ಮತ್ತಿಮುಡ, ನೀಲಕಂಠರಾವ ಮೂಲಗೆ, ಮೇಯರ ವಿಶಾಲ ದರ್ಗಿ, ಬಿ.ಜಿ ಪಾಟೀಲ, ರಾಜಕುಮಾರ ಪಾಟೀಲ ತೆಲ್ಕೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚಂದು ಪಾಟೀಲ, ಶಿವರಾಜ ರದ್ದೆವಾಡಗಿ, ಸಂಗಮೇಶ ನಾಗನಹಳ್ಳಿ, ನಿತೀನ ಜಿ, ಹರ್ಷಾನಂದ ಜಿ, ರಾಜು ಎಲ್ ಮತ್ತು ಗೌರವ ಉಪಸ್ಥಿತಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಸೇರಿದಂತೆ ಹಲವುಜನ ಗಣ್ಯಮಾನ್ಯರು ಪಾಲ್ಗೊಂಡಿದ್ದರು.