ಮಹಾತ್ಮ ಬಸವೇಶ್ವರರ ಜಾತ್ರಾ ಮಹೋತ್ಸವಬೆಳ್ಳಿ ತೊಟ್ಟಿಲು ಅದ್ಧೂರಿ ಮೆರವಣಿಗೆ
ಬಸಕವಲ್ಯಾಣ:ಮೇ.10: ಪ್ರತಿ ವರ್ಷದಂತೆ ಈ ವರ್ಷವು ಸಹ ಮಹಾತ್ಮ ಬಸವೇಶ್ವರರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಜಾತ್ರೆಯ ಮೊದಲನೇ ದಿವಸ ಶುಕ್ರವಾರದಂದು ಮು. 5 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನವರ ಮೂರ್ತಿಗೆ ಅಷ್ಠಗಂಧ ಪೂಜೆಯೊಂದಿಗೆ ಕಾರ್ಯಮಗಳು ಚಾಲನೆಗೊಂಡವು. ತದನಂತರ ನೀಲಮ್ಮ ಬಳ ಗೋರ್ಟಾ ರವರಿಂದ ವಚನ ಪಠಣ ನಡೆಯಿತು. ನಂತರ ಬೆಳಗ್ಗೆ 7 ಗಂಟೆಗೆ ಶ್ರೀ ಬಸವಣ್ಣನವರ ಬೆಳ್ಳಿ ತೊಟ್ಟಿಲು ಪೂಜೆಯನ್ನು ಮುಚಳಂಬದ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಪರಮ ಪೂಜ್ಯ ಶೊ.ಬ್ರ. ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ನೆರವೇರಿಸಿದರು. ಬಿಕೆಡಿಬಿ ಆಯುಕ್ತರಾದ ರಮೇಶ ಕೋಲಾರ ವರು ಬೆಳ್ಳಿ ತೊಟ್ಟಿಲು ಮೇರವಣಿಗೆ ಚಾಲನೆ ನೀಡಿದರು. ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೇರವಣಿಗೆಯು ನಗರದ ಕೋಟೆ ಮುಖಾಂತರ ಗಾಂಧಿವೃತ್ತ, ಬಸವೇಶ್ವರ ವೃತ್ತ ಹಾಗೂ ಹರಳಯ್ಯಾ ವೃತ್ತದವೆಗೆ ಬಂದು ಮರಳಿ ದೇವಸ್ಥಾನಕ್ಕೆ ಸೇರಿತ್ತು. ಮೇರವಣಿಗೆಯಲ್ಲಿ ವಿವಿಧ ಕಲಾ ತಂಡಗಳಿಂದ ಸಂಗೀತ ವಾದ್ಯಗಳೊಂದಿಗೆ ವೈಭವದೊಂದಿಗೆ ಜರುಗಿತ್ತು. ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು, ಶಾಸಕ ಶರಣು ಸಲಗರ, ಬಿಡಿಪಿಸಿ ಅಧ್ಯಕ್ಷರಾದ ಬಸವರಾಜ ಕೋರಕೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶೇಶಿಕಾಂತ ದುರ್ಗೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಪ್ರಮುಖರಾದ ಶಿವಕುಮಾರ ಬಿರಾದಾರ, ರವಿ ಕೊಳಕೂರ, ಚಂದ್ರಕಾಂತ ಲಾತೂರೆ, ಅರ್ಜುನ ಕನಕ, ಮನೋಹರ ಮೈಸೆ, ಶರಣು ಅಲಗೂಡ ಸೇರಿದಂತೆ ನೂರಾರು ಜನರು ಭಾಗವಹಿಸಿದರು.
ವಿವಿಧ ಕಡೆ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಗೋರ್ಟಾ (ಬಿ) ಲಿಂಗಾಯತ ಮಹಾಮಠದ ಪೂಜ್ಯ ಶ್ರೀ ಪ್ರಭುದೇವರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ, ಹುಮನಬಾದ ಡಿ.ವ್ಯಾ.ಎಸ್.ಪಿ. ನ್ಯಾಮೇಗೌಡ ಗಾಂಧಿ ವೃತ್ತದಲ್ಲಿ ಹುಲಸೂರಿನ ಪರಮ ಪೂಜ್ಯ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು ಬಸವೇಶ್ವರ ವೃತ್ತದಲ್ಲಿ, ಬೀದರ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಡಾ. ಮಹೇಶ ಪಾಟೀಲ ಶ್ರೀ ಹರಳಯ್ಯ ವೃತ್ತದಲ್ಲಿ ಧ್ವಜಾರೋಹಣ ನೇರವೇರಿಸಿದರು. ಈ ಸಂದರ್ಭದಲ್ಲಿ ಬಿಡಿಪಿಸಿ ಹಾಗೂ ವಿಶ್ವಸ್ಥ ಸಮಿತಿ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇಂದು ಸಂಜೆ 5 ಗಂಟೆಗೆ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಜರುಗಲಿದೆ.