ರಾಣಾ ಪ್ರತಾಪ 90 ಕೀಲೋ ತೂಕದ ಖಡ್ಗ ಬಳಸುತ್ತಿದ್ದ:ದಶರಥ್‍ಸಿಂಗ್
ತಾಳಿಕೋಟೆ:ಮೇ.10: ಮಹಾ ರಾಣಾಪ್ರತಾಪಸಿಂಹ್ ಅವರು ವಾಯುವ್ಯ ಭಾರತದ ರಾಜ್ಯವಾದ ಮೇವಾರವನ್ನು ಆಳುತ್ತಿದ್ದ ಅವರು ರಜಪೂತರ ವಂಶಕ್ಕೆ ಸೇರಿದವರಾಗಿದ್ದರಲ್ಲದೇ ತೀಕ್ಷಣ ಸ್ವಭಾವ ಹೊಂದಿದ್ದ ರಜಪೂತರ ಹೆಮ್ಮೆಯ ಮತ್ತು ಆತ್ಮ ಗೌರವದ ಸಾಕಾರರೂಪವಾಗಿದ್ದರೆಂದು ಸ್ಥಳೀಯ ರಜಪೂತ ಸಮಾಜದ ಹಿರಿಯ ಪುರಸಭಾ ಮಾಜಿ ಅಧ್ಯಕ್ಷರಾದ ದಶರಥ್‍ಸಿಂಗ್ ಮನಗೂಳಿ ಅವರು ಹೇಳಿದರು.
ಗುರುವಾರರಂದು ಸ್ಥಳೀಯ ರಜಪೂತ ಸಮಾಜ ಬಾಂದವರ ವತಿಯಿಂದ ಮಹಾರಾಣಾ ಪ್ರತಾಪಸಿಂಹ್ ಅವರ ಜಯಂತ್ಯೋತ್ಸವ ಅಂಗವಾಗಿ ಮಹಾ ರಾಣಾ ಪ್ರತಾಪಸಿಂಹ್ ಸರ್ಕಲ್‍ದಲ್ಲಿ ಮಹಾರಾಣಾಪ್ರತಾಪಸಿಂಹ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಏರ್ಪಡಿಸಲಾದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ತೀಕ್ಷಣ ಸ್ವಭಾವದ ರಜಪೂತರ ಹೆಮ್ಮೆಯ ಅಲ್ಲದೇ ಆತ್ಮ ಗೌರವದವರಾದ ಪ್ರತಾಪಸಿಂಹ್ ಅವರು ಶತಮಾನಗಳ ವರೆಗೆ ರಜಪೂತರ ಮಹಾತ್ವಾಕಾಂಕ್ಷೆಯ ಗುಣಗಳಿಗೆ ದ್ರುಷ್ಠಾಂತವಾಗಿದ್ದರೆಂದರು. ದೇಶಕ್ಕಾಗಿ ಜೀವನ ಉದ್ದಕ್ಕೂ ಹೋರಾಟ ನಡೆಸಿದ ರಾಣಾಪ್ರತಾಪಸಿಂಹ್ ಅವರು ತಂದೆ ಉದಯಸಿಂಗ್ ಅವರ ಮಾರ್ಗದರ್ಶನದೊಂದಿಗೆ ಹೋರಾಟ ನಡೆಸಿದ ಮಹಾರಾಜರಾಗಿದ್ದರು ಹಿಂದೂ ಧರ್ಮದ ಬಗ್ಗೆ ಬಹಳೇ ಕಾಳಜಿ ಹೊಂದಿದ್ದರೆಂದರು. ಯುದ್ದದ ಹೋರಾಟಕ್ಕಾಗಿ ಮುಂದೆ ಬಂದ ಎದುರಾಳಿಯ ಕೈಯಲ್ಲಿ ಖಡ್ಗವಿಲ್ಲದಿದ್ದರೂ ಅವರಿಗೆ ತನ್ನಲ್ಲಿಯ ಖಡ್ಗವನ್ನು ನೀಡಿ ಭಯಹುಟ್ಟಿಸುತ್ತಿದ್ದರಲ್ಲದೇ ತಾನೂ ಸಹ ಎರಡನೇಯ ಖಡ್ಗವನ್ನು ಬಳೆಸಿ ಮಹಾರಾಣಾಪ್ರತಾಪ ಸಿಂಹ್ ಅವರು ತನ್ನ ಭಾರ ಎತ್ತುವ ಸಾಮಥ್ರ್ಯದಿಂದ ಸುಮಾರು 90 ಕೀಲೋ ಭಾರದ ಖಡ್ಗಗಳನ್ನು ಹಿಡಿದು ಹೋರಾಟ ಮಾಡುತ್ತಿದ್ದ ಅಂತಹ ಶೂರ ದೀರರ ವಂಶದಲ್ಲಿ ಜನ್ಮತಾಳಿದ ನಾವೇಲ್ಲರೂ ದೇಶದ ರಕ್ಷಣೆಗಾಗಿ ಪಣತೊಡೊಣ ಇಂದು ಅವರ ಜಯಂತ್ಯೋತ್ಸವ ದಿನದಂದು ಎಲ್ಲರೂ ಪ್ರಾಮಾಣಿಕತನದಿಂದ ಅವರ ಮಾರ್ಗದತ್ತ ಸಾಗಿ ದೇಶದ ಇತಿಹಾಸ ಕಾಪಾಡೋಣವೆಂದರು.
ಮಹಾರಾಣಾಪ್ರತಾಪ ಸಿಂಹ್ ಸರ್ಕಲ್‍ದಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಜಪೂತ ಸಮಾಜದ ಶ್ರೀ ಅಂಬಾಭವಾನಿ ಮಂದಿರಕ್ಕೆ ತಲುಪಿ ಶ್ರೀ ದೇವಿಯ ಮಹಾ ಪ್ರಸಾದದೊಂದಿಗೆ ಮಂಗಲಗೊಂಡಿತು.
ಈ ಉತ್ಸವದ ನೇತೃತ್ವವನ್ನು ರಜಪೂತ ಸಮಾಜದ ಅಧ್ಯಕ್ಷರಾದ ಹರೀಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಸುರೇಶ ಹಜೇರಿ, ರಘುವೀರಸಿಂಗ್ ಹಜೇರಿ, ಬಾಬುಸಿಂಗ್ ಹಜೇರಿ, ಅಮಿತಸಿಂಗ್ ಮನಗೂಳಿ, ಗೋವಿಂದಸಿಂಗ್ ಹಜೇರಿ, ಮಾನಸಿಂಗ್ ಕೊಕಟನೂರ, ಗೋವಿಂದಸಿಂಗ್ ಮೂಲಿಮನಿ, ಕೇಸರಸಿಂಗ್ ಹಜೇರಿ, ಸುರೇಶಕುಮಾರ ಹಜೇರಿ, ವಿಠ್ಠಲಸಿಂಗ್ ಹಜೇರಿ, ನೀತೀನ ವಿಜಾಪೂರ, ರಮೇಶ ಗೌಡಗೇರಿ, ಅವರನ್ನೋಳಗೊಂಡು ರಜಪೂತ ಸಮಾಜದ ಯುವಕ ಮಂಡಳಿ ಹಾಗೂ ಅಭಿಮಾನಿಗಳು ಮತ್ತು ಸಮಾಜ ಬಾಂದವರು ವಹಿಸಿದ್ದರು.