ಬಸವದಳದಲ್ಲಿ ಬಸವೇಶ್ವರ ಜಯಂತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.10: ಇಲ್ಲಿನ ಬಸವೇಶ್ವರ ನಗರದ ಬಸವದಳ ಸಭಾಂಗಣದಲ್ಲಿ ಇಂದು ಜಗಜ್ಯೋತಿ ಬಸವೇಶ್ವರರ 891 ಜಯಂತಿ ಮತ್ತು ಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯ್ತು.
ಬಸವದಳದ ಅನುಯಾಯಿಗಳು ಬೆಳಿಗ್ಗೆ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿ, ಬಸವಣ್ಣನ ವಿಗ್ರಹವನ್ನು ತೊಟ್ಟಿಲಲ್ಲಿಟ್ಟು ಜಯಂತಿಯ ನಮನ ಸಲ್ಲಿಸಿದರು.
ಸಮಾಜದ ಗಣ್ಯರಿಗೆ ಈ ವೇಳೆ ಸತ್ಕರಿಸಿ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 5 ಕ್ಕೆ  ಮುನಿಷಿಪಲ್ ಹೈಸ್ಕೂಲ್ ಮೈದಾನದ ಬಳಿಯಿಂದ ಬಸವೇಶ್ವರ ಮತ್ತು ಮಲ್ಲಮ್ಮನ ಭಾವಚಿತ್ರದ ಮೆರವಣಿಗೆ ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ತೇತು ಬೀದಿ ಮೂಲಕ ಹೆಚ್.ಆರ್. ಗವಿಯಪ್ಪ ವೃತ್ತಕ್ಕೆ ಬಂದು ತಲುಪಲಿದೆ‌