ಬಸವ ಜ್ಯೋತಿಗೆ ಸ್ವಾಗತ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.10: ಪ್ರತಿ ವರ್ಷದಂತೆ ಈ ವರ್ಷವೂ ಕೂಡಲ ಸಂಗಮದಿಂದ ದರೂರು ಶಾಂತನಗೌಡ ಮತ್ತವರ ಬಳಗ ಬಸವೇಶ್ವರ ಜಯಂತಿ ಅಂಗವಾಗಿ ತಂದ ಬಸವ ಜ್ಯೋತಿಯನ್ನು ಬಸವ ದಳದ ಸಭಾಂಗಣದ ಬಳಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷ ಹೆಚ್.ತಿಮ್ಮನಗೌಡ ಸ್ವಾಗತಿಸಿದರು.
 ಈ ವೇಳೆ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ  ಯಾಳ್ಪಿ ಮೇಟಿ ಪಂಪನಗೌಡ, ಸಾಹುಕಾರ್ ಸತೀಶ್ ಬಾಬು, ಸಮುದಾಯದ ಮುಖಂಡರಾದ ಮೇಟಿ ದಿವಾಕರಗೌಡ, ಗೋನಾಳ್ ನಾಗಭೂಷಣಗೌಡ ಮೊದಲಾದವರು ಇದ್ದರು.
One attachment • Scanned by Gmail