ಮಾಜಿ ಕಾರ್ಪೊರೇಟರ್ನಾರಾಯಣಮ್ಮ ನಿಧನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.10:  ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ  ನಾರಾಯಣಮ್ಮ(84)  ಇಂದು ಬೆಳಿಗ್ಗೆ ನಿಧನಹೊಂದಿದ್ದಾರೆ.
ಇವರು ಕಾಂಗ್ರೆಸ್ ಮುಖಂಡ ಬಾಪೂಜಿನಗರ ವೆಂಕಟೇಶ್ ಅವರ ತಾಯಿ ಹಾಗೂ 2007 ರಲ್ಲಿ ಬಹುಜನ ಸಮಾಜ ಪಕ್ಷದಿಂದ ಕಾರ್ಪೊರೇಟರ್ ಆಗಿದ್ದರು. 
ಮೃತರ ಅಂತಿಮ ಸಂಸ್ಕಾರವನ್ನು ಇಂದು ಸಂಜೆ 4 ಗಂಟೆಗೆ ನಗರದಲ್ಲಿ  ನೆರವೇರಿಸಲಾಗುವುದು.
ಸಂತಾಪ:
ನಾರಾಯಣಮ್ಮ ನಿಧನಕ್ಕೆ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್,  ಪಾಲಿಕೆ ಸದಸ್ಯೆ ಉಮಾದೇವಿ, ಶಿವರಾಜ್ ಹೆಗಡೆ ಮುಖಂಡರಾದ ಸಂತಾಪ ಕೋರಿದ್ದಾರೆ.