ಕಾಂಗ್ರೆಸ್ ಕಚೇರಿಯಲ್ಲಿ ಬಸವ ಜಯಂತಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.10: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷ   ಅಲ್ಲಂ ಪ್ರಶಾಂತ್ ನೇತೃತ್ವದಲ್ಲಿ, ಕರ್ನಾಟಕದ ಸಾಂಸ್ಕೃತಿಕ ನಾಯಕ,  ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಇಂದು ಆಚರಿಸಲಾಯಿತು.
ಈ ವೇಳೆ ಮಾತನಾಡಿದ  ಪ್ರಶಾಂತ್ ಅವರು,ಬಸವಣ್ಣ ನವರು ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಎಲ್ಲರಲ್ಲೂ ಸಮಾನತೆಯನ್ನು ಮೂಡಿಸಲು ಹೋರಾಡಿದ ಬಗ್ಗೆ ಶ್ಲಾಘಿಸಿದರು.
ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಮೇಟಿ ಪಂಪನಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಂ.ಎಸ್.ಮಂಜುಳಾ,   ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಚಾನಾಳ್ ಮಂಜುನಾಥ್, ಎಸ್.ಸಿ ವಿಭಾಗದ ಅಧ್ಯಕ್ಷ ಯರಕುಲ ಸ್ವಾಮಿ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಶೇಖ್ ಅಫಕ್ ಹುಸೇನ್, ಬ್ಲಾಕ್ ಅಧ್ಯಕ್ಷರುಗಳಾದ ಮೀನಳ್ಳಿ ಚಂದ್ರಶೇಖರ್ ಗೌಡ, ಅಭಿಲಾಶ್,  ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಶೋಭಾ ಕಾಳಿಂಗ, ವೈ.ಶ್ರೀನಿವಾಸುಲು, ಎಂ.ಪಿ.ಕಮಲ, ಬಗರ್ ಹೂಕುಂ ಸಮಿತಿಯ ಅಧ್ಯಕ್ಷರಾದ ತಿಮ್ಮನಗೌಡ, ಕಾಂಗ್ರೆಸ್ ಮುಖಂಡರಾದ ಸೋಮಪ್ಪ, ಯತೀಂದ್ರ ಗೌಡ, ಮಲ್ಲಯ್ಯ, ನಾಗಭೂಷಣ ಗೌಡ, ವೀರಸೇನ ರೆಡ್ಡಿ, ಗಾದಿಲಿಂಗಪ್ಪ, ಮೇಟಿ ದಿವಾಕರ್ ಗೌಡ, ಮಿಂಚೆರಿ ಪಂಪಣ್ಣ, ಬ್ಯಾಲಿಚಿಂತೆ ಶಿವಶಂಕರ್ ಗೌಡ, ಕೆ.ರಾಮಲಿಂಗಾ, ಲಿಂಗರಾಜ್, ಗಂಗಾಧರ್,  ಸಿ.ಅತ್ತಾಉಲ್ಲಾ, ಇಂದ್ರನಾಥ್ ರೆಡ್ಡಿ, ಮಹಿಳಾ ಮುಖಂಡರಾದ ಎಂ.ಶಾಂತಮ್ಮ, ಬಿ.ಏ.ಮಲ್ಲೇಶ್ವರಿ ಹಾಗೂ ಇತರ ಕಾಂಗ್ರೆಸ್ ಮುಖಂಡರು ಮತ್ತು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.