ಶ್ರೀಗುರುಪುಟ್ಟರಾಜ ಸಂಗೀತ ಪಾಠಶಾಲೆಯ ಸಮ್ಮರ್ ಸರಿಗಮಕ್ಕೆ ಸಮಾರೋಪ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ..10: :ನಗರದ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ಹಾಗೂ ಲಯನ್ಸ್‌ ಕ್ಲಬ್ ಆಫ್
ಸಹಯೋಗದಲ್ಲಿ ಕಪ್ಪಗಲ್ ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಿನ್ನೆ ಸಂಜೆ
“ಸಮ್ಮರ್ ಸರಿಗಮ” ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲೆಕ್ಕಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು, “ಬಾಲ್ಯದಿಂದಲೇ ಮಕ್ಕಳಿಗೆ ಸಂಗೀತ ವಿಧ್ಯೆ ನೀಡಲು  ಪೋಷಕರು ಪ್ರೇರೇಪಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರಗೌಡ, ಶ್ರದ್ಧೆಯಿಂದ ಸಂಗೀತ ಕಲಿತರೆ, ಇದೇ ಕ್ಷೇತ್ರದಲ್ಲಿ ದೊಡ್ಡ ಸಾಧನೆ
ಮಾಡಲು ಸಾಧ್ಯವಿದೆಂದರು.  ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ವಿ.ರಾಮಚಂದ್ರ, ವೈದ್ಯ ಡಾ.ಸುರೇಶ್, ರಾಘವ ರೆಡ್ಡಿ ದಮ್ಮೂರು ಪಾಲ್ಗೊಂಡಿದ್ದರು. ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಅಧ್ಯಕ್ಷೆ ಕೆ.ಕವಿತಾ ಡಿ.ಕಗ್ಗಲ್ ಹಾಗೂ ಕೆ.ವಿಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ದೊಡ್ಡ ಬಸವ ಗವಾಯಿ ಡಿ.ಕಗ್ಗಲ್ ಹಾಗೂ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಶಿಬಿರಾರ್ಥಿ ವಿದ್ಯಾರ್ಥಿಗಳು ವಿವಿಧ ಕನ್ನಡ ಗೀತೆಗಳನ್ನು ಹಾಡಿ ನೆರೆದವರ ಗಮನ ಸೆಳೆದರು.
ಸರಿಗಮ ಖ್ಯಾತಿಯ ಸೃಷ್ಟಿ ಸುರೇಶ್ ಅವರು ಸಿನಿಮಾ ಗೀತೆಗಳನ್ನು ಹಾಡಿ ರಂಜಿಸಿದರು. ಪುಟ್ಟರಾಜ, ವೀರಪಂಚಾಕ್ಷರಿ ಕ್ಯಾಷಿಯೋ, ಉಮೇಶ್‌ ತಬಲಾ ಹಾಗೂ ಹರ್ಷಾ ಆಚಾರ್ ಪ್ಯಾಡ್ ಸಾಥ್ ನೀಡಿದರು.