ಉಪನ್ಯಾಸ ಕಾರ್ಯಕ್ರಮ
ಧಾರವಾಡ,ಮೇ.10: ರವೀಂದ್ರನಾಥಠಾಕೂರ್ ಭಾರತದ ಸಾಂಸ್ಕøತಿಕ ಪುನರುಜ್ಜೀವನದ ಮಹಾನ್ ವ್ಯಕ್ತಿ. ಅವರುದೇಶ, ಕಾಲ ಮೀರಿದ ಸೃಜನಶೀಲ ಕವಿಗಳು ಎಂದುಧಾರವಾಡಆಕಾಶವಾಣಿಯಕಾರ್ಯಕ್ರಮ ಮುಖ್ಯಸ್ಥಡಾ. ಬಸು ಬೇವಿನಗಿಡದಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಕೀರ್ತಿಶೇಷ ದಿ.ಪ್ರಹ್ಲಾದ ನರೇಗಲ್ ಮಾಸ್ತರರದತ್ತಿ ನಿಮಿತ್ತ ಆಯೋಜಿಸಿದ್ದಗುರುದೇವರವೀಂದ್ರನಾಥಠಾಕೂರ್‍ಜನ್ಮದಿನಾಚರಣೆ ಹಾಗೂ ಉಪನ್ಯಾಸ’ ಕಾರ್ಯಕ್ರಮದಲ್ಲಿ ರವೀಂದ್ರನಾಥಠಾಕೂರದಾರ್ಶನಿಕ ಲೇಖಕರು' ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಕವಿ ರವೀಂದ್ರನಾಥರು ಬಹುಮುಖ ವ್ಯಕ್ತಿತ್ವ ಉಳ್ಳ ಮೇರು ಕವಿಗಳು.ಸಾಹಿತಿಗಳಾಗಿ, ತತ್ವಜ್ಞಾನಿಗಳಾಗಿ, ಶಿಕ್ಷಣ ತಜ್ಞರಾಗಿ, ಕಲಾವಿದರಾಗಿ, ಕಥೆಗಾರರಾಗಿ ಮಾತ್ರವಲ್ಲಓರ್ವ ಪ್ರಸಿದ್ಧ ಸಂಗೀತ ಸಂಯೋಜಕರೂಆಗಿದ್ದರು.ಅವರಗೀತಾಂಜಲಿ ಕೃತಿಗೆ 1913 ರಲ್ಲಿ ನೊಬೆಲ್ ಪುರಸ್ಕಾರದೊರೆಯಿತು.ಕವಿ ರವೀಂದ್ರನಾಥಠಾಕೂರರು ನೊಬೆಲ್ ಪುರಸ್ಕಾರ ಪಡೆದಏಷ್ಯಾದ ಮೊದಲಿಗರು.ಬಾಂಗ್ಲಾ ಹಾಗೂ ಶ್ರೀಲಂಕಾ ದೇಶಕ್ಕೂರಾಷ್ಟ್ರಗೀತೆ ರಚಿಸಿಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. ಅವರಗೋರಾ’ ಕಾದಂಬರಿ ಹಾಗೂ `ಕಾಬೂಲಿವಾಲಾ’ ಕಥೆಯಲ್ಲಿದೈನಂದಿನ ಜೀವನ ಹಾಗೂ ಭಾವನೆಗಳನ್ನು ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ.ಅವರಎಲ್ಲಾ ಕೃತಿಗಳಲ್ಲಿ ಭಾರತದ ಸಾಂಸ್ಕøತಿಕ ಪ್ರತಿಬಿಂಬ ಕಾಣಬಹುದು.ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದಅವರುಜನಸಾಮಾನ್ಯರನ್ನು ಪ್ರೀತಿಯಿಂದಕಾಣುವಗುಣ ಹೊಂದಿದ್ದರು.ಅವರೊಬ್ಬ ಪ್ರಗತಿಶೀಲ ಚಿಂತನೆ ಉಳ್ಳ ಪ್ರಯೋಗಶೀಲ ವ್ಯಕ್ತಿಗಳು.ಕೆಲ ಸಂದರ್ಭದಲ್ಲಿಗಾಂಧೀಜಿಯವರ ವಿಚಾರ ಧಾರೆಗಳನ್ನು ಖಂಡಿಸುವ ಸ್ವಂತಿಕೆ ಹೊಂದಿದ್ದರು.ಕಂದಾಚಾರ ವಿರೋಧಿಸಿ ವೈಜ್ಞಾನಿಕದೃಷ್ಟಿಕೋನ ಹೊಂದಿದ್ದರು.ಸ್ವಾತಂತ್ರ್ಯ ಹೋರಾಟಗಾರರಾದಅವರು ವಸಾಹತುಶಾಹಿ ಆಳ್ವಿಕೆಯನ್ನು ಖಂಡಿಸಿದ್ದು ಉಂಟು.ಜೊತೆಗೆ ಪಾಶ್ಚಾತ್ಯ ವಿಚಾರ ಧಾರೆಗಳನ್ನು ಮೇಳೈಸಿಕೊಂಡಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದಕಾರ್ಯಕಾರಿ ಸಮಿತಿ ಸದಸ್ಯಡಾ.ಜಿನದತ್ತ ಹಡಗಲಿ ಮಾತನಾಡಿ, ಕವಿ ರವೀಂದ್ರನಾಥಠಾಕೂರಅವರಗೀತಾಂಜಲಿ ಕೃತಿ ಸೌಂದರ್ಯದಖಣಿ. ಅವರುದೈವಿ ಸಿದ್ಧಿಯ ಕವಿ.ಶ್ರೇಷ್ಠ ಶಿಕ್ಷಣ ತಜ್ಞರಾದಅವರು ಮಕ್ಕಳು ಪರಿಸರದಜೊತೆ ಸಾಮರಸ್ಯದಿಂದ ಬದುಕುವುದಕ್ಕಾಗಿ ಪ್ರಕೃತಿಯ ಮಡಿಲಲ್ಲೇ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು.ಅದುಇಂದುಅಂತಾರಾಷ್ಟ್ರೀಯಖ್ಯಾತಿ ಪಡೆದ ವಿಶ್ವವಿದ್ಯಾಲಯವಾಗಿದೆ.ರಾಷ್ಟ್ರದಘನತೆ ಶಿಕ್ಷಣದಲ್ಲಿ ಅಡಗಿದೆ ಎಂಬ ಉದಾತ್ತ ಭಾವನೆಅವರದಾಗಿತ್ತು. ವಿಶ್ವಭಾರತಿ ವಿಶ್ವಕುಟುಂಬ ಭಾವನೆಯದ್ಯೋತಕವಾಗಿದೆಎಂದು ಹೇಳಿದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ವೀರಣ್ಣಒಡ್ಡೀನ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಎಂ.ಎಸ್. ನರೇಗಲ್ ವಂದಿಸಿದರು.
ಕಾಯಕ್ರಮದಲ್ಲಿ ಸತೀಶತುರಮರಿ, ಸಿ.ಯು. ಬೆಳ್ಳಕ್ಕಿ, ಎಂ.ಬಿ. ಹೆಗ್ಗೇರಿ, ಶ್ರೀಧರ ಗಸ್ತಿ, ಅಶೋಕ ಕೋರಿ, ಡಾ. ಆನಂದ ಪಾಟೀಲ, ಸುಜಾತಾ ಹಡಗಲಿ, ಎಸ್.ಕೆ.ಕುಂದರಗಿ, ದೇಸಾಯಿಗೌಡ ಪಾಟೀಲ ಸೇರಿದಂತೆ ಮುಂತಾದವರಿದ್ದರು.