ನೂರಕ್ಕೆ ನೂರರಷ್ಟು ಸಾಧನೆ
ಲಕ್ಷ್ಮೇಶ್ವರ, ಮೇ10: ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್ ಎಸ್ ಕೂಡ್ಲಮಠ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಯ ಅಪೇಕ್ಷಾ ಎಮ್. ಮೇಗಲಮನಿ 625 ಅಂಕಗಳಿಗೆ 604 ಅಂಕಗಳನ್ನು ಪಡೆದು ಪ್ರತಿಶತ 96. 64 ಮತ್ತು ಅನ್ನಪೂರ್ಣ ಎಂ. ಬದಾಮಿ 625 ಅಂಕಗಳಿಗೆ 583 ಅಂಕಗಳನ್ನು ಪಡೆದು ಪ್ರತಿಶತ 93. 28 ಮತ್ತು ರಂಜಿತಾ ಆರ್ ಕೂಸುನೂರ್ 625 ಅಂಕಗಳಿಗೆ 579 ಅಂಕಗಳನ್ನು ಪಡೆದು ಪ್ರತಿಶತ 92. 64 ಸಾಧನೆ ಮಾಡಿದ್ದಾರೆ. ಆಕಾಶ. ಜಿ. ನುಲ್ವಿ 625 ಅಂಕಗಳಿಗೆ 573 ಅಂಕಗಳನ್ನು ಪಡೆದು ಪ್ರತಿಶತ 91. 68 ಅಂಕಗಳನ್ನು ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 29 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಹಿತ ಪಾಸಾಗಿದ್ದರೆ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಚೇರ್ಮನರಾದ ಎಸ್ ಪಿ ಬಳಿಗಾರ ವೈಸ್ ಚರ್ಮನ್ನರಾದ ಹನುಮಂತಪ್ಪ ತಳವಾರ ಸಿಎಂ ರಾಗಿ, ಮುಖ್ಯೋಪಾಧ್ಯಾಯರಾದ, ಸಿ ಎಸ್ ಮೊಗಲಿ, ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.