ಬಸವಣ್ಣ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಹುಬ್ಬಳ್ಳಿ.ಮೇ.10: ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಹಾಗೂ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು.
ವಿಭಾಗೀಯ ಕಚೇರಿ ಹಾಗೂ ವಿಭಾಗೀಯ ಕಾರ್ಯಾಗಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮತ್ತು ಅಧಿಕಾರಿಗಳು ಇಬ್ಬರೂ ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿದರು.
ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರತಿಪಾದಿಸಿದ ಲಿಂಗಬೇಧ, ವರ್ಗಬೇಧಗಳನ್ನು ತೊಲಗಿಸಿ ಸಮಾಜದ ಸರ್ವತೋಮುಖ ಸುಧಾರಣೆಗೆ ನೀಡಿದ ಕೊಡುಗೆಗಳು ವಿಶ್ವಮಾನ್ಯತೆ ಪಡೆದಿವೆ. ನುಡಿದಂತೆ ನಡೆದು ವಚನಗಳ ಮೂಲಕ ನೀಡಿದ ಸಮಾನತೆ, ಕಾಯಕತತ್ವ, ದಾಸೋಹ ತತ್ವ ಮುಂತಾದ ಅವರ ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಹೇಮರಡ್ಡಿ ಮಲ್ಲಮ್ಮ ನವರು ತಮ್ಮ ಬದುಕಿನಲ್ಲಿ ಎದುರಿಸಿದ ಸಂಕಷ್ಟಗಳನ್ನೇ ಸಾಧನೆಯ ಮೆಟ್ಟಲುಗಳನ್ನಾಗಿ ಬದಲಾಯಿಸಿ ಸಮಾಜದ ಒಳಿತಿಗೆ ಶ್ರಮಿಸಿದರು. ಬಸವಣ್ಣನವರ ಹಾಗೂ ಹೇಮರಡ್ಡಿ ಮಲ್ಲಮ್ಮ ರವರ ಜೀವನ ಸಂದೇಶಗಳು ಇಂದಿಗೂ ಪ್ರಸ್ತುತ ವಾಗಿದ್ದು, ಅನುಕರಣೀಯವಾಗಿದೆ
ಎಂದು ಹೇಳಿದರು.
ಶರಣಬಸವ ಕಾರ್ಯಕ್ರಮ ನಿರೂಪಿಸಿದರು. ಅಧಿಕಾರಿಗಳಾದ ರಾಜೇಂದ್ರ, ಐ.ಐ. ಕಡ್ಲಿಮಟ್ಟಿ, ರಮೇಶ ಕರಿಂಡಿ ಹಾಗೂ ಮತ್ತು ಸಿಬ್ಬಂದಿಗಳು ಇದ್ದರು.