ವಾರ್ಷಿಕೋತ್ಸವ
ಮುನವಳ್ಳಿ,ಮೇ.10: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ಇಂದು ಮೇ.10 ರಿಂದ ಮೇ 14 ರವರೆಗೆ 23 ನೇ ವರ್ಷದ ವಾರ್ಷಿಕೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಜರಗುವುದು.
ಇಂದು ಸಂಜೆ 6-30 ಕ್ಕೆ ಶ್ರೀ ಸೋಮಶೇಕರ ಮಠದ ಶ್ರೀ ಮುರುಘೇಂದ್ರ ಶ್ರೀಗಳು, ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಪ್ರತಿದಿನ ಸಂಜೆ 6-30 ರಿಂದ 8-30 ರವರೆಗೆ ಹಿಪ್ಪರಗಿಯ ಸಿದ್ದಾರೋಢ ಶರಣರಿಂದ ಸಿದ್ದಾರೊಡರ ಮಹಾತ್ಮೆಯ ಪ್ರವಚನ ಜರಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಸಾಯಿಬಾಬಾ ಕೃಪೆಗೆ ಪಾತ್ರರಾಗಲು ಶ್ರೀ ಸಾಯಿ ಸೇವಾ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುವರು.