ಕಾಯಕ ಪರಿಕಲ್ಪನೆ: ವಿಶ್ವಕ್ಕೆ ಬಸವಣ್ಣನವರ ಅಮೂಲ್ಯ ಕೊಡುಗೆ
ಧಾರವಾಡ,ಮೇ.10: ಕಾಯಕ ಪರಿಕ್ಪನೆ ಬಸವಣ್ಣನವರು ವಿಶ್ವಕ್ಕೆ ನೀಡಿದಅಮೂಲ್ಯಕೊಡುಗೆಯಾಗಿದೆ. ಕಾಯಕ ಸಮಾಜದ ಹಿತವನ್ನು ಬಯಸುವಂತಿರಬೇಕು.ಅದು ಸತ್ವಯುತ ಹಾಗೂ ಶುದ್ಧವಾಗಿರಬೇಕೆಂದು ವಿಶ್ರಾಂತ ಪೊಲೀಸ್‍ಅಧಿಕಾರಿಗಿರೀಶ ಕಾಂಬಳೆ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ`ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನವರಕಾಯಕದ ಮಹತ್ವ’ ವಿಷಯಕುರಿತುಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಬಸವಣ್ಣನವರುದೇಶ ಮತ್ತುಕಾಲಾತೀತ ವ್ಯಕ್ತಿಯಾಗಿದ್ದರು. ಬುದ್ದನ ನಂತರ ಬಸವಣ್ಣನವರು ಸಮಾನತೆ ಹಾಗೂ ಮಹಿಳಾ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್‍ಚೇತನ. ಕಾಯಕವು ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ. ಜೊತೆಗೆಉತ್ತಮ ವ್ಯಕ್ತಿತ್ವರೂಪಿಸುವ ಪ್ರಭಲ ಮಾಧ್ಯಮವಾಗಿದೆ. ಕಾಯಕ ಸಿದ್ದಾಂತ ಮಗುವಿನ ಜನ್ಮದೊಡನೆ ಪ್ರಾರಂಭವಾಗಿಅಂತ್ಯದವರೆಗೂ ನಿರಂತರವಾಗಿರುತ್ತದೆ.ಕಾಯಕತತ್ವಕ್ಕೆ ಬಸವಣ್ಣನವರು ನೈತಿಕ ಮತ್ತುಆಧ್ಯಾತ್ಮಿಕಆಯಾಮವನ್ನು ಸೇರಿಸಿ ಒಂದುಉದಾತ್ ಕಲ್ಪನೆಯನ್ನಾಗಿಸಿದರು.ನಾವು ಮಾಡುವಕಾಯಕ ಸದಾ ಸಮಾಜದ ಹಿತವನ್ನು ಬಯಸುವಂತಿರಬೇಕು.ಕಾಯಕ, ದಾಸೋಹ, ಸಮಾನತೆ ಬಸವಾದಿ ಶರಣರುಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದಉಪಾಧ್ಯಕ್ಷರಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಶರಣರು ಸ್ತ್ರೀ-ಪುರುಷ ಹಾಗೂ ಜಾತಿ, ಮಥ, ಪಂಥ ಎಂಬ ಬೇಧಭಾವ ಖಂಡಿಸಿ ಸಮಾನತೆಯ ಸಂದೇಶ ಸಾರಿದರು.ಜಗತ್ತಿನಎಲ್ಲಧರ್ಮದ ತಿರುಳು ದಯೇ, ಮಾನವೀಯತೆÉ ಹಾಗೂ ಪರೋಪಕಾರದಂತಹ ನೈತಿಕ ನೆಲೆಗಟ್ಟಿನ ಮೇಲೆ ರೂಪಗೊಂಡಿವೆ. ನಾವು ಮಾಡುವಕಾಯಕದಲ್ಲಿದೇವರನ್ನುಕಾಣಬೇಕು. ಮತ್ತುಅದು ಸತ್ಯ ಶುದ್ಧವಾಗಿರಬೇಕುಎಂದರು.
ವೇದಿಕೆಯಲ್ಲಿನಗಣ್ಯಮಾನ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನಗಳೊಂದಿಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಬಸವಪ್ರಭು ಹೊಸಕೇರಿ, ಸತೀಶತುರಮರಿ, ಶಂಕರ ಕುಂಬಿ ಮತ್ತುಕಾರ್ಯಕಾರಿ ಸಮಿತಿ ಸದಸ್ಯರಾದಡಾ.ಶ್ರೀಶೈಲ ಹುದ್ದಾರ, ಡಾ.ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ ಹಾಗೂ ಶಿವಾನಂದ ಭಾವಿಕಟ್ಟಿ, ಎಂ. ಎಂ.ಚಿಕ್ಕಮಠ, ವಿಜಯಲಕ್ಷ್ಮಿಕಲ್ಯಾಣಶೆಟ್ಟರ, ಶಶಿಕಲಾ ಶಾಸ್ತ್ರೀಮಠ, ಎಂ.ಎಸ್. ನರೇಗಲ್ಲ, ಎಸ್.ಎಂ.ದಾನಪ್ಪಗೌಡರ, ಸಿದ್ದು ಯಾವಗಲ್ಲ, ಪ್ರಕಾಶ ಮಲ್ಲಿಗವಾಡ, ಡಾ. ಸದಾಶಿವ ಮರ್ಜಿ, ಸಿದ್ರಾಮ ಹಿಪ್ಪರಗಿ ಹಾಗೂ ಸಂಘದ ಸಿಬ್ಬಂದಿಗಳಾದ ಎಸ್. ಎಂ.ರಾಚಯ್ಯನವರ, ಎಸ್. ಆಯ್. ಭಾವಿಕಟ್ಟಿ ಮತ್ತಿತರ ಸಿಬ್ಬಂದಿ ವರ್ಗ ಸೇರಿದಂತೆಅನೇಕರು ಭಾಗವಹಿಸಿದ್ದರು.