ಜಗಳೂರು ತಾಲೂಕು ಎಸ್ಸೆಸ್ಸೆಲ್ಸಿ ಫಲಿತಾಂಶ 1ನೇ ಸ್ಥಾನ ದಿಂದ 4ನೇ ಸ್ಥಾನಕ್ಕೆ  ಕುಸಿತ.

ಸಂಜೆವಾಣಿ ವಾರ್ತೆ
ಜಗಳೂರು.ಮೇ.೧೦- ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಪ್ರಥಮ ಸ್ಥಾನದಲ್ಲಿದ್ದ ಜಗಳೂರು ತಾಲ್ಲೂಕು ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಸರ್ಕಾರಿ ಶಾಲೆಗಳು ಕಳಪೆ ಸಾಧನೆ ಮಾಡಿವೆ.ತಾಲ್ಲೂಕಿಗೆ ಈ ಬಾರಿ ಶೇ.70ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಕಳೆದ ವರ್ಷ ಶೇ96 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಫಲಿತಾಂಶದಲ್ಲಿ ಒಟ್ಟಾರೆ ಶೇ 26 ರಷ್ಟು ಕಡಿಮೆಯಾಗಿದೆ.ತಾಲ್ಲೂಕಿನಲ್ಲಿ 1134 ಬಾಲಕಿಯರು 1187 ಬಾಲಕರು ಸೇರಿದಂತೆ ಒಟ್ಟು 2321 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು 1625 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.ಸರ್ಕಾರಿ, ಹಾಗು ಖಾಸಗಿ ಸೇರಿದಂತೆ ಕಳೆದ ಬಾರಿ 23 ಪ್ರೌಢಶಾಲೆಗಳಲ್ಲಿ ಶೇ100ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಕೇವಲ 3 ಶಾಲೆಗಳು ಮಾತ್ರ ಶೇ100 ಫಲಿತಾಂಶ ಸಾಧನೆ ಮಾಡಿವೆ.ತಾಲ್ಲೂಕಿನ ಮುಗ್ಗಿದ ರಾಗಿಹಳ್ಳಿಯ ಮೊರಾರ್ಜಿ ವಸತಿ ಶಾಲೆ, ಉದ್ದಗಟ್ಟ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ದಿದ್ದಿಗೆ ಗ್ರಾಮದ ಖಾಸಗಿ ರೂರಲ್ ಪಬ್ಲಿಕ್ ಶಾಲೆಗಳು ಶೇ 100ರಷ್ಟು ಫಲಿತಾಂಶದ ಸಾಧನೆ ಮಾಡಿವೆ.2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎನ್ಎಂಕೆ ಶಾಲೆಯ ವಿದ್ಯಾರ್ಥಿ ಜೆ.ಎನ್ ಸಂಜನಾ 614 ಜಿಎಂ ಇಮಾಂ ಸ್ಮಾರಕ ಶಾಲೆಯ ವಿದ್ಯಾರ್ಥಿನಿ ಎಂ.ಜಿ ಸಿಂಚನಾ 611 ಬಾಲ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಯಾದ ಕುಮಾರಿ ಆರ್.ಎನ್ ಆಕಾಂಕ್ಷ 607 (ಶೇ 97.12) ಅಂಕ ಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮೆದಿಗಿನಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಎಲ್.ಶ್ರೇಯ 598(ಶೇ.95.68) ಸಿದ್ದಾರ್ಥ್ 588 ಎ.ಯಶ್ವಂತ್ ಸೇರಿದಂತೆ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಆರ್ ವಿ ಎಸ್ ಶಾಲೆಯ ವಿದ್ಯಾರ್ಥಿ ಸೌಮ್ಯ 596 ಅಂಕ ಗಳಿಸಿದ್ದಾರೆ ಉದ್ದಗಟ್ಟದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಎಚ್. ಹಂಸಶ್ರೀ 581 ಅಂಕ ( ಶೇ92.24) ನೇತ್ರಾವತಿ ಎಸ್.ಎಚ್. 563 (ಶೇ90.04) ಪ್ರಥಮ ಸ್ಥಾನಗಳಿಸಿದ್ದಾರೆ.ಕಲ್ಲೇದೇವಪುರದ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿನಿ ಎನ್.ವಿ ಕಲ್ಲಮ್ಮ 527. ಜಿ.ಟಿ ದ್ರಾಕ್ಷಾಯಿಣಿ 523. ಡಿ.ವಿನಯ್ 549 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ತಾಲೂಕಿನಲ್ಲಿ 50 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ