ಬಸವಣ್ಣನವರ ಆದರ್ಶಗಳು ನಮ್ಮ ಬದುಕಾಗಬೇಕು

ಚಿತ್ರದುರ್ಗ.ಮೇ.10 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಾಂಸ್ಕೃತಿಕ ನಾಯಕ ಮಾನವತಾವಾದಿ ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಶಿವಯೋಗಿ ಕಳಸದ ಮಾತನಾಡಿ, ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ನಾನು ಅಧಿಕಾರಿಯಾಗಿದ್ದಾಗ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿಸಿದ್ದೆ. ಬಸವಣ್ಣನವರ ಆದರ್ಶಗಳು ನಮ್ಮ ಬದುಕಾಗಬೇಕು. ಬಸವಣ್ಣನವರು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಅವರು ವಿಶ್ವಮಾನ್ಯರು. ಐತಿಹಾಸಿಕ ಕಾರ್ಯಕ್ರಮ ಇದಾಗಬೇಕೆಂದರು.ಡಾ. ಜಯಬಸವ ಸ್ವಾಮಿಗಳು ಮಾತನಾಡಿ, ಜಯದೇವ ಜಗದ್ಗುರುಗಳ ಒತ್ತಾಸೆಯಿಂದ ಪ್ರಥಮ ಬಾರಿಗೆ ದಾವಣಗೆರೆ ವಿರಕ್ತಮಠದಲ್ಲಿ ಬಸವ ಜಯಂತಿ ಆಚರಿಸಲಾಯಿತು. 1913ರಲ್ಲಿ ಹರ್ಡೇಕರ್ ಮಂಜಪ್ಪನವರು ಆರಂಭಿಸಿದರು. ಮೃತ್ಯುಂಜಯ ಅಪ್ಪಗಳು ಇದಕ್ಕೆ ಸಮ್ಮತಿಸಿದರು. ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಸಾರಿದ್ದು ಸ್ವಾಗತಾರ್ಹ. ಶೂನ್ಯಪೀಠ ಹಾಗು ಮುರುಘಾ ಪರಂಪರೆಗೆ ಅನ್ಯೋನ್ಯ ಸಂಬAಧವಿದೆ. 10ರಂದು ಸಂಜೆ ಅನುಭವ ಮಂಟಪದಲ್ಲಿ ಸಭಾ ಕಾರ್ಯಕ್ರಮ, ಮೊದಲ ಎರಡುದಿನ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ವಚನಕಂಠಪಾಠ ಸ್ಪರ್ಧೆ, ವೇಷಭೂಷಣ ಸ್ಪರ್ಧೆ ಮೊದಲಾಗಿ ಮಾಡಬೇಕಿದೆ ಎಂದರು.ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷೆ ಆರ್. ಶೈ¯ಜಾಬಾಬು ಮಾತನಾಡಿ, ಜಯಂತಿ ಸಂದರ್ಭದಲ್ಲಿ ಶರಣರ ವಚನಗಳನ್ನು ಹಾಡಿಸುತ್ತ, ಶರಣರ ಹಬ್ಬ ಆಚರಿಸಬೇಕೆಂದರು.ನಾಗರಾಜ ಸಂಗಂ ಮಾತನಾಡಿ, ಮೂರುದಿನಗಳ ಕಾರ್ಯಕ್ರಮ ನಡೆಯಬೇಕು. ಎರಡೂ ಕಡೆ ಕಾರ್ಯಕ್ರಮ ಒಂದೇ ಆಗಬೇಕು. ರಂಗೋಲಿ ಸ್ಪರ್ಧೆ, ಬಸವಣ್ಣನವರ ಫೋಟೋಗಳು ರಾರಾಜಿಸಬೇಕು. ಕಾರ್ಯಕ್ರಮ ರಂಗಮAದಿರದಲ್ಲಿ ನಡೆಯಬೇಕು. ಬಸವಣ್ಣನವರ ತತ್ತ÷್ವಗಳು ಜನರಿಗೆ ತಲುಪಬೇಕು ಎಂದು ಹೇಳಿದರು.