ಹರಪನಹಳ್ಳಿ ತಾಲೂಕಿಗೆ ಶೇ..69.08 ಫಲಿತಾಂಶ

ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮೇ.೧೦: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ  ಪ್ರಕಟವಾಗಿದ್ದು, ಹರಪನಹಳ್ಳಿ ತಾಲೂಕಿಗೆ ಶೇ..69.08 ಪಲಿತಾಂಶ ಬಂದಿದೆ.ಗಂಡು, ಹೆಣ್ಣು ಸೇರಿ ಒಟ್ಟು 4098 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಸಿದ್ದು, ಅದರಲ್ಲಿ ಗಂಡು-1219, ಹೆಣ್ಣು -1612 ಒಟ್ಟು 2831 ಜನರು ಉತ್ತೀರ್ಣರಾಗಿದ್ದಾರೆ. ಶೇ.69.08 ಪಲಿತಾಂಶ ಬಂದಿದೆ.ತಾಲೂಕಿನ ಮಾಚಿಹಳ್ಳಿ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಪ್ರೌಢ ಶಾಲೆ ನೂರಕ್ಕೆ ನೂರರಷ್ಟು ಪಲಿತಾಂಶ ಪಡೆದಿದೆ.ಹರಪನಹಳ್ಳಿ ಪಟ್ಟಣದ ವಿವಿಎಸ್ ಪ್ರೌಢ ಶಾಲೆಯ ಕೆ.ಸಿ.ಸಾಗರ್ 625ಕ್ಕೆ 620 ಅಂಕ ಪಡೆದು ಜಿಲ್ಲೆ ದ್ವಿತೀಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕನ್ನಡ -124, ಇಂಗ್ಲೀಷ್ -100, ಹಿಂದಿ -100, ಗಣಿತ -100, ವಿಜ್ಞಾನ -97, ಸಾಮಾಜ ವಿಜ್ಞಾನ -99 ಹೀಗೆ ಒಟ್ಟು 620 ಅಂಕಗಳಿಸಿದ್ದಾನೆ.ಪಟ್ಟಣದ ವಿವಿಎಸ್ ಪ್ರೌಢ ಶಾಲೆಯ ಎಂ.ಎಸ್.ಪ್ರತೀಕ 625ಕ್ಕೆ 615 ಅಂಕಗಳಿಸುವುದರ ಮೂಲಕ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾನೆ. ಸರ್ಕಾರಿ ಬಾಲಕೀಯರ ಪ್ರೌಢ ಶಾಲೆಯ ವಿದ್ಯಾರ್ಥಿ ಅಪ್ಸಾನ ಬಾನು 613 ಅಂಕಗಳಿಸುವುದರ ಮೂಲಕ ತಾಲೂಕಿಗೆ ತೃತೀಯ ಸ್ಥಾನ ಗಳಿಸಿದ್ದಾಳೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ತಿಳಿಸಿದ್ದಾರೆ.