ಹಿಂದೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಶೂರ ಶಿವಾಜಿ: ಶಿವಾನಂದ ಲಾಳಸಂಗಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.10:ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ಆದರ್ಶ ಗುಣಗಳು ಯುವ ಜನಾಂಗಕ್ಕೆ ಈಗಲೂ ಅನುಕರಣೀಯ ಎಂದು ಯುವ ಮುಖಂಡ ಶಿವಾನಂದ ಲಾಳಸಂಗಿ ಹೇಳಿದ್ದಾರೆ.
ನಗರದ ಸ್ವಾಮೀ ವಿವೇಕಾನಂದ ಸೇವಾ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತ ವಹಿಸಿ ಮಾತನಾಡಿದರು.
ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ನಡೆಸಿ ಛತ್ರಪತಿ ಎಂಬ ಹೆಸರು ಪಡೆದ ಶಿವಾಜಿ ಅವರ ತತ್ವಾದರ್ಶ ಹಾಗೂ ಸಿದ್ದಾಂತಗಳನ್ನು ಎಲ್ಲರೂ ಅನುಸರಿಸಬೇಕು ಎಂದರು.
ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶ ಭಕ್ತ. ಹಿಂದು ಸಮಾಜದ ಕಟ್ಟಲು ತನ್ನ 16ನೇ ವಯಸ್ಸಿನಲ್ಲಿ ಧೈರ್ಯ ಸಾಹಸ ಹಾಗೂ ಸಮಯ ಪ್ರಜ್ಞೆಗಳ ಮೂಲಕ ಶ್ರಮಿಸಿದ ಪರಿಣಾಮ ಪ್ರಸ್ತುತ ದಿನಗಳಲ್ಲಿ ಹಿಂದೂ ಸಮಾಜ ಹೆಮ್ಮರವಾಗಿ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಮುದಕಣ್ಣ ಅವಟಿ, ಶಿವಶರಣ ಲಾಳಸಂಗಿ, ಅನಿಲ ಒಂಟಿ, ರಾಚಪ್ಪ ಶಿರಗುಪ್ಪಿ, ಶಾಂತವೀರ ಸಿದ್ದಾಪೂರ, ಉಮೇಶ ಗೌಳಿ, ಸಿದ್ರಾಮ ಉಪ್ಪಿನ, ಸುನೀಲ ಮೋದಿ, ಶಂಕರ ಮಂಗ್ಯಾಳ, ಶಿವಾನಂದ ದುದ್ದಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.