ಶಿಕ್ಷಕರಿಗೆ ಸಂಬಳ ನೀಡಿಲ್ಲ ರಾಜ್ಯ ಸರ್ಕಾರ ದಿವಾಳಿಯಾಗಿದೆ:  ವೈ ಎ ನಾರಾಯಣಸ್ವಾಮಿ ಆರೋಪ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧೦; ರಾಜ್ಯದ ಶಿಕ್ಷಕರಿಗೆ ಸಂಬಳ ನೀಡಿದಂತಹ ದಯನೀಯ ಸ್ಥಿತಿಗೆ ರಾಜ್ಯ ಸರ್ಕಾರ  ತಲುಪಿದ್ದು, ಸರ್ಕಾರ ದಿವಾಳಿ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ ಎನ್.ಲ ನಾರಾಯಣಸ್ವಾಮಿ ಆರೋಪಿಸಿದರು. ದಾವಣಗೆರೆ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ. ಮತಯಾಚನೆ ಮಾಡಿ  ನಂತರ  ಮಾತನಾಡಿ, ರಾಜ್ಯದ ಅನುದಾನಿತ ಶಾಲೆಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ವರ್ಗಕ್ಕೆ ಕಳೆದ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಸಂಬಳ ಮಾಡಿ ಅಂತ ಹೇಳಿ ಶಿಕ್ಷಕರು ಜನ ಪ್ರತಿನಿಧಿಗಳು ಶಿಕ್ಷಕ ಸಂಘಟನೆಗಳು. ಒತ್ತಾಯ ಮಾಡಿದರು ಸಹ ಸರ್ಕಾರ ಕೇರ್ ಮಾಡುತ್ತಿಲ್ಲ ಎಂದು ಆರೋಪಿಸಿದರು.ಸಂಬಳಕ್ಕೂ ದುಡ್ಡು ಇಲ್ಲದೆ ಸರ್ಕಾರ ದಿವಾಳಿಯಾಗಿದೆ.ಶಿಕ್ಷಣ ಮಂತ್ರಿಗಳು ಬೇಜವಾಬ್ದಾರಿತ ಖಂಡನೀಯ ಮತ್ತು ಸರ್ಕಾರ ಶಿಕ್ಷಕರ ಪಾಲಿಗೆ ಬದುಕಿದ್ದು ಸತ್ತಂತೆ ಇದೆ. ಸರ್ಕಾರ ಇಂದು ಸಂಜೆಯೊಳಗೆ ಶಿಕ್ಷಕರ ಸಂಬಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಿ ಎನ್ ರಾಮ್ ರೆಡ್ಡಿ, ಮುಬಾರಕ್ ಅಲಿ, ಸಿದ್ದಪ್ಪ, ಚಂದ್ರಪ್ಪ, ಸಾಂಬಾ ಶಿವಯ್ಯ, ಯೋಗೀಶ್ ಸೇರಿದಂತೆ ವೈ ಎ ಎನ್ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.