ಕರ್ತವ್ಯ ನಿರತ ಗುಮಾಸ್ತ ಹೃದಯಾಘಾತದಿಂದ ಸಾವು
ಶಿಡ್ಲಘಟ್ಟ.ಮೇ,೧೦:ತಾಲ್ಲೂಕು ಕಚೇರಿಯಲ್ಲಿ ಪ್ರಥಮ ಧರ್ಜೆ ಸಹಾಯಕರಾಗಿ ಕಾರ್ಯ ನಿರ್ಹಿಸುತ್ತಿದ್ದ ವೇಳೆ ಹೇಮಚಂದ್ರ ನಾಯಕ್ (೪೧) ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಹೇಮಚಂದ್ರ ನಾಯಕ್ ಗುರುವಾರ ಬೆಳಗ್ಗೆ ತಾಲ್ಲೂಕು ಕಚೇರಿಗೆ ಬಂದು ಕಾರ್ಯನಿರ್ವಹಿಸುತ್ತದ್ದು ಮಧ್ಯಾಹ್ನದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದ ಬೇಳೆ ತಕ್ಷಣ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸುವ ವೇಳೆಯಲ್ಲಿ ಹೃದಯಘಾತದಿಂದ ಅಗಲಿದ್ದಾರೆ.
ಹೇಮಚಂದ್ರ ನಾಯಕ್ ಈ ಮೊದಲು ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಕಾರಣಾಂತರದಿಂದ ಶಿಡ್ಲಘಟ್ಟ ತಾಲ್ಲೂಕು ಕಛೇರಿಗೆ ವರ್ಗಾವಣೆಗೊಂಡಿದ್ದರು. ಇವರದು ಮೂಲತಃ ಕನಕಪುರದ ವಾಸಿಯಾಗಿದ್ದು ಸದ್ಯಕ್ಕೆ ತಾಲ್ಲೂಕು ಕಚೇರಿಯಲ್ಲಿ ಪ್ರಥಮ ಧರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸಲು ದಿನ ನಿತ್ಯವೂ ಕಛೇರಿಗೆ ಯಲಹಂಕದಿಂದ
ಬರುತ್ತಿದ್ದರು ಎನ್ನಲಾಗಿದೆ,
ತಹಸೀಲ್ದಾರ್ ಬಿ.ಎನ್. ಸ್ವಾಮಿಯವರು ಕುದ್ದು ತಮ್ಮ ವಾಹನದಲ್ಲಿ ಕರೆದುಕೊಂಡು ಆಸ್ಪತ್ರೆಗೆ ಬರುವ ವೇಳೆ ಕೊನೆ ಉಸಿರು ಎಳೆದಿದ್ದಾರೆ. ಮೃತ ವ್ಯಕ್ತಿ ತಂದೆ ತಾಯಿ ಪತ್ನಿ, ಹಾಗೂ ಒಂದು ಗಂಡು ಮಗು ಮತ್ತು ಬಂದು ಬಳಗವನ್ನು ಅಗಲಿದ್ದಾರೆ.