ರಕ್ತದಾನ ಮಾಡಲು ಮುಂದೆ ಬರಬೇಕು
ಆನೇಕಲ್.ಮೇ.೧೦:ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜ ಮುಖಿ ಕಾರ್ಯಗಳಲ್ಲಿ ಒಂದು ಎಂದು ಚಲನ ಚಿತ್ರ ನಟಿ ನಿಧಿ ಹೆಗಡೆ ರವರು ತಿಳಿಸಿದರು.
ಅವರು ಡಾ.ಎಸ್.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ರಕ್ತದಾನ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಹಾದಾನ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಕೂಡ ರಕ್ತದಾನ ಮಾಡಬಹುದು. ರಕ್ತದಾನದಿಂದ ಒಂದು ಜೀವ ಉಳಿಸಿದಂತಾಗುತ್ತದೆ ಎಂದರು.
ರಕ್ತದಾನದ ಬಗ್ಗೆ ಕೆಲವೊಂದು ಮೂಢನಂಬಿಕೆಗಳಿವೆ. ಪ್ರತಿಯೊಬ್ಬರೂ ಇಂಥ ಮೂಢ ನಂಬಿಕೆಗಳಿಂದ ಹೊರಬಂದು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಪುಣ್ಯ ಲಭಿಸುವುದರ ಜೊತೆಗೆ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗಿ ನಮಗೂ ಉತ್ತಮ ಆರೋಗ್ಯ ಭಾಗ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನಕ್ಕೆ ಮುಂದೆ ಬರಬೇಕು ಎಂದು ಕಿವಿಮಾತು ಕೇಳಿದರು.
ಇನ್ನು ಎನ್.ಎಸ್.ಎಸ್ ಹಾಗೂ ರೋವರ್‍ಸ್ ಅಂಡ್ ರೇಜಂರ್‍ಸ್ ಮತ್ತು ವೈಆರ್.ಸಿ ಹಾಗೂ ನಾರಾಯಣ ಹೆಲ್ತ್ ಸಿಟಿ ಸಹಯೋಗದಲ್ಲಿ ರಕ್ತದಾನ ಶಿಭಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ.ಎಸ್.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ, ಎನ್.ಎಸ್.ಎಸ್. ಸಂಚಾಲಕರಾದ ಡಾ.ರಾಮಕೃಷ್ಣಪ್ಪ, ವೈ.ಆರ್.ಸಿ ಸಂಚಾಲಕರಾದ ಡಾ ಹೇಮಾವತಿ, ರೋವರ್‍ಸ್ ಅಂಡ್ ರೇಂಜರ್‍ಸ್ ನ ಸಂಚಾಲಕರಾದ ಡಾ. ಸುನೀತಾ ಕುಮಾರಿ, ಗ್ರಂಥಾಲಯ ಪಾಲಕರಾದ ಎನ್, ಕೋಕಿಲ, ಐಕ್ಯೂ ಎಸಿ ಮಂಜುನಾಥ್ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಬಾಗವಹಿಸಿದ್ದರು.