ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಕೋಲಾರ,ಮೇ,೧೦-ಬಸವ ಜಯಂತಿಯನ್ನು ವರ್ಷಕ್ಕೊಮ್ಮೆ ಸೀಮಿತ ಗೊಳಿಸದೆ ಬಸವಣ್ಣನವರ ವಚನ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಪ್ರತಿ ದಿನವೂ ಬಸವ ಜಯಂತಿಯನ್ನು ಆಚರಿಸುವಂತಾದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಕಾಣುವಂತಾಗುತ್ತದೆ ಎಂದು ಬಸವ ಸಮಿತಿ ಅಧ್ಯಕ್ಷರಾದ ಡಾ ಅರವಿಂದ್ ಬಿ. ಜತ್ತಿ ಅಭಿಪ್ರಾಯ ಪಟ್ಟರು,
ನಗರದ ಶ್ರೀ ಬಸವೇಶ್ವರ ಭಕ್ತ ಮಂಡಳಿ ಮತ್ತು ಶರಣೆಯರ ಬಳಗವು ಅರಳೇ ಪೇಟೆಯ ಶ್ರೀ ಬಸವೇಶ್ವರ ದೇವಾಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವು ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ ಶರಣರ ವಚನಗಳಲ್ಲಿ ಕನಿಷ್ಠ ಒಂದನ್ನಾದರೂ ಅಳವಡಿಸಿ ಕೊಂಡರೆ ಸಾಕು ಜೀವನದಲ್ಲಿ ಪರಿವರ್ತನೆ ಕಾಣ ಬಹುದಾಗಿದೆ. ಅಂತರಂಗದಲ್ಲಿನ ಅನುಭಾವಗಳು ಅದಾ ಹಾಗೇ ಚಿಂತನೆಗಳು ಬದಲಾವಣೆಗಳಾಗುತ್ತಾ ಜೀವನ ಚಕ್ರ ತಿರುಗುತ್ತಿರುತ್ತದೆ ಎಂದರು.
ವಚನಗಳ ಪ್ರತಿ ನುಡಿಯಲ್ಲೂ ಅಪಾರ ಶಕ್ತಿ ಅಡಗಿದೆ. ಬಸವನ ತತ್ವಗಳ ಜೀವನಕ್ಕೆ ಅಧಾರ ಎಂದಾಗ ಎತ್ತರವಾಗಿ ಬೆಳೆಯುತ್ತೇವೆ, ಪ್ರತಿಯೊಂದು ವಚನಗಳನ್ನು ಅರ್ಥೈಸಿ, ಆತ್ಮವಲೋಕನ ಮಾಡಿ ಕೊಂಡಾಗ ಬದುಕಿನಲ್ಲಿ ಪರಿವರ್ತನೆ ಕಾಣುವಂತಾಗುವುದು, ನಾನು ಸಹ ಬಸವಣ್ಣನಾಗ ಬೇಕೆಂಬ ಭಾವನೆಗಳು ಅಂತರಂಗದಲ್ಲಿ ಮೋಡಿ ಬಂದಾಗ ಸಮಾಜದಲ್ಲಿ ಆದರ್ಶವಾಗಿ ಬಾಳಲು ಪೂರಕವಾಗಲಿದೆ ಎಂದು ತಿಳಿಸಿದರು,
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಾಗಲಾಪುರ ಸಂಸ್ಥಾನ ಮಠದ ಪೀಠಾಧಿಕಾರಿಗಳಾದ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಭಗವಂತ ಅನೇಕ ಜನ್ಮ ನೀಡಿದ್ದು ಅದರಲ್ಲಿ ಮಾನವ ಜನ್ಮವು ಅತ್ಯಂತ ಶ್ರೇಷ್ಟ ಜನ್ಮವಾಗಿದೆ, ಜನನ ಮರಣಗಳು ಸಾಮಾನ್ಯವಾಗಿದ್ದು ಇದರಲ್ಲಿ ಸತ್ತು ಬದುಕಿರುವಂತ ಭಕ್ತಿ ಭಂಡಾರಿ ಬಸವಣ್ಣನವರ ಆದರ್ಶದ ತತ್ವಗಳು ಮೈಗೊಡಿಸಿ ಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.ಈ ವೇಳೆ ಡಾ.ಅರವಿಂದ ಬಿ. ಜತ್ತಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು,
ಶರಣೆಯರ ಬಳಗದ ಅಧ್ಯಕ್ಷರಾದ ಉಷಾಗಂಗಾಧರ್ ಮಾತನಾಡಿ ವೀರಶೈವ ಸಮುದಾಯದಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುವಂತೆ ತಿಳಿಸಿ ಕೊಡುವ ಮೂಲಕ ಸಮಾಜದಲ್ಲಿ ಮಹಿಳೆಯರಿಗೆ ಶೋಷಣೆಯಿಂದ ಮುಕ್ತಿ ಕಲ್ಪಿಸಿದರು ಎಂದರು,
ಸಮಾಜದಲ್ಲಿನ ಅನೇಕ ಮೌಡ್ಯಗಳನ್ನು ತೊಡೆದು ಹಾಕಲು ಒತ್ತು ನೀಡಿ ಸುಧಾರಣೆಯ ಪಥದತ್ತ ಕೊಂಡೊಯ್ಯಲು ಸಮಾನತೆಯ ಕ್ರಾಂತಿ ಉಂಟು ಮಾಡಿದರು. ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಎಲ್ಲಾರಿಗೂ ಸಾಮಾಜಿಕ ನ್ಯಾಯ ದೊರಕಿಸಿ ಇಂದಿನ ಸಂವಿಧಾನ ರಚನೆಗೆ ಪ್ರೇರಕರಾಗಿ ವಿಶ್ವಗುರುವಾದರು ಎಂದು ಪ್ರತಿಪಾದಿಸಿದರು,
ಕಳೆದ ೩೫ ವರ್ಷಗಳಿಂದ ಶರಣೆಯರ ಬಳಗವು ಬಸವೇಶ್ವರ ಜಯಂತಿ ಕಾರ್ಯಕ್ರಮಗಳನ್ನು ಮುನ್ನಡೆಸಿ ಕೊಂಡು ಬರುವ ಜೂತೆಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬರುತ್ತಿದೆ ಎಂದರು
ಶರಣೆಯರ ಬಳಗದ ವಿಮಾಲ ಬೈಲಪ್ಪ ಮಾತನಾಡಿದರು, ಇದೇ ಸಂದರ್ಭದಲ್ಲಿ ವಚನ ಹಾಗೂ ಕ್ರೀಡಾ ಸ್ವರ್ಧೆಯ ವಿಜೇತರಿಗೆ ಮತ್ತು ಶರಣೆಯರ ಬಳಗದ ಅಧ್ಯಕ್ಷರಾದ ಉಷಾಗಂಗಾಧರ್ ಅವರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು, ನಂತರದಲ್ಲಿ ವಚನ ಗಾಯನ ಹಾಗೂ ಶಿವ ತಂಡವ ನೃತ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅಧ್ಬುತವಾಗಿ ಮೂಡಿ ಬಂದಿತು,
ವೇದಿಕೆಯಲ್ಲಿ ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷರಾದ ಸಿ. ಗಂಗಾಧರ್, ಉಪಾಧ್ಯಕ್ಷ ಕೆ.ಬಿ.ಬೈಲಪ್ಪ ಹಾಗೂ ಎನ್.ಆರ್,ಪ್ರಭಾಕರ ಉಪಸ್ಥಿತರಿದ್ದರು,