ಸಾಂಸ್ಕøತಿಕ ನಾಯಕನ ಸಂಸ್ಕøತಿ ನಮ್ಮೇಲ್ಲರಿಗೂ ಮಾದರಿ: ಡಿ.ಸಿ ಗೋವಿಂದರೆಡ್ಡಿ
ಸಂಜೆವಾಣಿ ವಾರ್ತೆ.
ಬೀದರ್:ಮೇ.10: ರಾಜ್ಯ ಸರ್ಕಾರವು ವಿಶ್ವಗುರು ಬಸವಣ್ನನವರನ್ನು ಸಾಂಸ್ಕøತಿಕ ನಾಯಕನೆಂದು ಘೋಷಣೆ ಮಾಡಿ ಬಸವಣ್ಣನವರ ವಿಚಾರಧಾರೆಗಳು ಇಡೀ ಜಗತ್ತು ಇಂದು ಅನುಕರಿಸುವಷ್ಟು ಶ್ರೇಷ್ಠವಾಗಿದೆ. ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಬಸವಣ್ನನವರ 770 ಅಮರ ಗಣಂಗಳು ಇದು ನಮ್ಮ ಕಾಯಕ ಹಾಗೂ ದಾಸೋಹದ ಪರಿಕಲ್ಪನೆ ಶ್ರೀಮಂತಗೊಳಿಸಿದೆ. ಅವರ ಜಯಂತಿ ಆಚರಿಸಿದರಷ್ಟೇ ಸಾಲದು, ಅವರ ಜೀವನ ಹಾಗೂ ಸಂದೇಶ ಅನುಕರಿಸಬೇಕಿದೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಬಸವಣ್ನನವರು ಕೇವಲ ಅಧ್ಯಾತ್ಮದ ಮೂರ್ತಿಯಾಗಿರದೇ ಶ್ರೇಷ್ಠ ಅಡಳಿತಗಾರರಾಗಿದ್ದರು. ಅವರ ಅನುಭವ ಮಂಟಪದ ನೀತಿ ಇಂದು ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ತಮ್ಮ ಸಂಸತ್ತಿನ ಮಾದರಿ ರೂಪಿಸಿಕೊಂಡಿವೆ. ಆಗಿನ ವಚನ ಸಾಹಿತ್ಯ ಇಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕಾರಣಿಭೂತವಾಗಿದೆ ಎಂದು ಬಣ್ಣಿಸಿದರು.
ರಾಜ್ಯದ ಪೌರಾಡಳಿತ ಸಚಿವ ರಹಿಮ್ ಖಾನ್ ಬಸವ ಜಯಂತಿಯ ಶುಭಾಷಯ ಕೋರಿದರು.
ಮೊದಲು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.
ನಂತರ ನಗರದ ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆಗೈದರು. ನಂತರ ವಚನ ಪಠಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮಂಗಲ ಹಾಡಿದರು.
ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಸದಸ್ಯರಾದ ಶಶಿ ಹೊಸಳ್ಳಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷ ಗಾದಗಿ, ಸಮಾಜದ ಮುಖಂಡರಾದ ಡಾ.ರಜನೀಶ ವಾಲಿ, ಬಸವರಾಜ ಧನ್ನೂರ್, ಸೋಮಶೇಖರ ಪಾಟೀಲ ಗಾದಗಿ, ಶಿವಶಂಕರ ಟೋಕರೆ, ಶರಣಪ್ಪ ಮಿಠಾರೆ ಸೇರಿದಂತೆ ನೂರಾರು ಬಸವ ಭಕ್ತರು, ಅಭಿಮಾನಿಗಳು ಕಾರ್ಯಕ್ರಮದಲ್ಲಿದ್ದರು.
ನಂತರ ಚಿಕಪೇಟ್ ರಸ್ತೆಯಲ್ಲಿರುವ ಲಾವಣ್ಯ ಕಲ್ಯಾಣ ಮಂಟಪದ ಎದುರು ಜಿಲ್ಲಾಡಳಿತ ಬಸವ ಭವನಕ್ಕಾಗಿ ಗುರುತಿಸಿರುವ ಒಂದು ಎಕರೆ ಹಾಗೂ 10 ಗುಂಟೆ ಜಮಿನಿನಲ್ಲಿ ಫಲಕ ಹಾಕಿ ಪೂಜೆಗೈಯ್ಯಲಾಯಿತು.
ಇದೇ ವೇಳೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕೂಡ ಆಚರಿಸಲಾಯಿತು.
ಇಂದು ಸಾಯಂಕಾಲ 5 ಗಂಟೆಗೆ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ ಎಂದು ಸಮಿತಿಯ ಪ್ರ.ಕಾರ್ಯದರ್ಶಿ ವಿರುಪಾಕ್ಷ ಗಾದಗಿ ತಿಳಿಸಿದ್ದಾರೆ.