ಗಡಿ ಭಾಗದ ಶ್ರೀಮತಿ ಎಸ್. ಎಸ್. ಬಿ. ಪ್ರೌಢಶಾಲೆಗೆ 91.17 ಫಲಿತಾಂಶ.
ಸಂಜೆ ವಾಣಿ ವಾರ್ತೆ
ಭಾಲ್ಕಿ :ಮೇ.10: ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ತಾಲೂಕಿನ ಗಡಿ ಭಾಗದ ಕಾಸರತುಗಾವ ಗ್ರಾಮದ ಶ್ರೀಮತಿ ಎಸ್. ಎಸ್. ಬಿ. ಪ್ರೌಢಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100 ಕ್ಕೆ 91.17 ಫಲಿತಾಂಶ ಪಡೆದ ತಾಲೂಕಿನಲ್ಲಿ ಏಕೈಕ ಶಾಲೆಯಾಗಿದೆ.
ಗ್ರಾಮೀಣ ಮತ್ತು ಗಡಿಭಾಗದ ಪ್ರದೇಶದಲ್ಲಿದ್ದರೂ ಒಳ್ಳೆಯ ಶಿಕ್ಷಣ, ಶಿಕ್ಷಣ ಜೊತೆ ಒಳ್ಳೆಯ ಸಂಸ್ಕಾರ ಕೋಡುತ್ತಿದೆ.2024 ಸಾಲಿನ ಹತ್ತನೇ ಪರೀಕ್ಷೆಯಲ್ಲಿ ನಗರ ಪ್ರದೇಶ ಮಕ್ಕಳಕ್ಕಿಂತ ನಾವೇನು ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ಈ ವರ್ಷ 10ನೇ ತರಗತಿ ಪರೀಕ್ಷೆಯಲ್ಲಿ 34 ವಿದ್ಯಾರ್ಥಿಗಳು ಪರೀಕ್ಷೆ ಕುಳಿತುಕೊಂಡಿದ್ದರು. 31 ವಿದ್ಯಾರ್ಥಿಗಳು ಪಾಸಾಗಿ ಶಾಲೆಗೆ 91.17% ಫಲಿತಾಂಶ ದಾಖಲಾಗಿದ್ದು ಭಾಲ್ಕಿ ತಾಲೂಕಿನ ಅನುದಾನಿತ ಶಾಲೆಯಲ್ಲಿ ಒಂದಾಗಿದೆ. .
ಅಭೀಷೇಕ.ಎಸ್ 90.72 ಪ್ರತಿಶತ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ . ಸ್ವಾತಿ /ಶಂಕರ 85% ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅಶ್ವಿನಿ ಹಣಮಂತ 82% ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ವೈಷ್ಣವಿ ಖಂಡುದಾಸ 80% ಶಂಕರ್ ಗೋವಿಂದ್ 79% ಸರಸ್ವತಿ ಸತೀಶ್ 79% ರತ್ನ ದಿಪ್ ಜ್ಞಾನೇಶ್ವರ್ 78% ಜೈದೀಪ್ ಗೋರಕನಾಥ್ 78% ವೈಭವ ರಾಮಕಿಶನ್ 76% ಸ್ನೇಹ ರಾಜಕುಮಾರ್ 75.2 ಪಡೆದಿರುತ್ತಾರೆ.
. 01 ವಿದ್ಯಾರ್ಥಿಗಳು ಅಗ್ರ ಶ್ರೇಣಿ ,22 ಪ್ರಥಮ ಸ್ಥಾನ,8 ಮಕ್ಕಳು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಗಡಿ ಭಾಗದ ಮಕ್ಕಳ ಶೈಕ್ಷಣಿಕ ಸಾಧನೆಗೆ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು , ಪರಮಪೂಜ್ಯ ಗುರು ಬಸವಪಟ್ಟದ್ದೇವರು, ಸಂಸ್ಥೆಯ ಕಾರ್ಯದರ್ಶಿಗಳಾದ ಮಹಾಲಿಂಗ ದೇವರು, ಸ್ಥಾನಿಕ ಸಮಿತಿಯ ಗೌರವ ಅಧ್ಯಕ್ಷರಾದ ಪಿ.ಎಸ್ ಬಿರಾದಾರ್, ಆಡಳಿತಾಧಿಕಾರಿಗಳಾದ ಮೋಹನ್ ರೆಡ್ಡಿ, ಪ್ರಮುಖರಾದ ಸಂಗ್ರಾಮ್ ಪಾಟೀಲ್, ಶಿವರಾಜ್ ಪಾಟೀಲ್ ವಾಡಿ, ಮಲ್ಲಿಕಾರ್ಜುನ ಬಿರಾದಾರ್, ಶಿವಕುಮಾರ್ ಪಾಟೀಲ್, ಮಹೇಶ್ ಬಿರಾದಾರ್, ಶಿವಕುಮಾರ್ ಬಿರಾದಾರ್, ಬಸವರಾಜ್ ಸ್ವಾಮಿ ಶಿವಣಿ, ಶ್ರೀನಿವಾಸ್ ಪಾಟೀಲ್ ಶಿವಣಿ, ಮೋಧೀನ್ ಸಾಬ್, ಅನಿಲ್ ಕುಮಾರ್ ಮಂಟೋಳೆ, ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ್. ಎಸ್. ಪಾಟೀಲ್, ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.