ವಿ.ಶ್ರೀನಿವಾಸ್ ಪ್ರಸಾದ್ ನುಡಿ ನಮನ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಚಾಮರಾಜನಗರ.ಮೇ.10:- ರಾಜ್ಯದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ್ ಪ್ರಸಾದ್ ರವರು. ಅವರು ಬದುಕಿನ ಹೆಚ್ಚುಕಾಲ ರಾಜಕೀಯದಲ್ಲಿಯೇ ಕಳೆದರು, ಅವರು ನಡೆಸಿದ ಹೋರಾಟಗಳು ದಲಿತರಿಗೆ ಆಶಾಕಿರನವಾಗಿದೆ. ಶ್ರೀನಿವಾಸ್ ಪ್ರಸಾದ್ ಅವರು ನೇರನುಡಿಗೆ ಹೆಸರಾದವರು ಎಂದು ಚಾಮರಾಜನಗರ ಜಿಲ್ಲೆಯ ಪಿ.ಯು.ಡಿ.ಡಿ ಮಂಜುನಾಥ ಪ್ರಸನ್ನ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಪರಿಶಿಷ್ಠ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘ ಚಾಮರಾಜನಗರ ಜಿಲ್ಲೆ ಸಂಘದ ಜಿಲ್ಲಾ ಕಯರ್ಂಕಾರಿ ಸಮಿತಿ ಸಭೆ ಹಾಗೂ ಸ್ವಾಭಿಮಾನದ ಮೇರು ಶಿಖರ, ದಲಿತ ಚೇತನ ದಮನಿತರ ದನಿ. ಸಂಸದ ಮಾಜಿ ಮಾಂತ್ರಗಳಾದ ದಿವಾಂಗತ ವಿ.ಶ್ರೀನಿವಾಸ್ ಪ್ರಸಾದ್ ಸಂಸ್ಮರಣೆಯಲ್ಲಿ ಸ್ವಾಭಿಮಾನದ ದೊರೆ ಅಜರಾಮರ ಪುಷ್ಪನಮನ, ನುಡಿನಮನ ಕರ್ಯಭಕ್ರಮದಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಭಾವಚಿತ್ರಕ್ಕೆ ಪುμÁ್ರ್ಬ ನೆ ಮಾಡಿ ಅವರು ಮಾತನಾಡಿದರು ವಿ.ಶ್ರೀನಿವಾಸ್ ಪ್ರಸಾದ್ ಬದುಕು ಉತ್ತವಾಗಿತ್ತು ಕೇಂದ್ರ, ಹಾಗೂ ರಾಜ್ಯದ ಮಂತ್ರಿಗಳಾಗಿ ಸೇವೆಗಳನ್ನು ನೀಡಿದ್ದಾರೆ ಅವರು ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಪರಿಶಿಷ್ಠ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಕೃಷ್ಣಕುಮಾರ್ ಮಾತನಾಡಿ ಶ್ರೀನಿವಾಸ್ ಪ್ರಸಾದ್ ಅವರು ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಮೂಲತಃ ಮೈಸೂರಿನ ಅಶೋಕಪುರಂನವರಾದ ಶ್ರೀನಿವಾಸಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
ಮೈಸೂರಿನ ಅಶೋಕಪುರಂನಲ್ಲಿ ಆಗಸ್ಟ್ 6, 1947 ರಂದು ಜನಿಸಿದ ಪ್ರಸಾದ್ ಅವರ ರಾಜಕೀಯ ಪ್ರಯಾಣವು ಮಹತ್ವದ ಮೈಲಿಗಲ್ಲುಗಳಿಂದ ಗುರುತಿಸಲ್ಪಟ್ಟಿದೆ. ಅವರು ಚಾಮರಾಜನಗರ ಕ್ಷೇತ್ರವನ್ನು ಏಳು ಅವಧಿಗೆ ಸಂಸದರಾಗಿ ಪ್ರತಿನಿಧಿಸಿದ್ದರು ಮತ್ತು ಎರಡು ಬಾರಿ ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿದ್ದರು.
ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮತ್ತು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವ ಸೇರಿದಂತೆ ಪ್ರಮುಖ ಸಚಿವ ಖಾತೆಗಳನ್ನು ಹೊಂದಿದ್ದರು. ಅವರ ರಾಜಕೀಯ ಜೀವನದಲ್ಲಿ ಹೆಚ್ಚಿನ ಅಭಿವೃದ್ದಿಗಳನ್ನು ಮಾಡಿದ್ದಾರೆ ಅವರ ಆತ್ಮಕ್ಕೆ ದೇವರು ಶಾತಿ ನೀಡಲಿ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸಿ.ಕೆ.ರಾಮಸ್ವಾಮಿ ಮಾತನಾಡಿ ಶ್ರೀನಿವಾಸ್ ಪ್ರಸಾದ್ ರವರಿಗೆ ಚಾಮರಾಜನಗರ ಜನತೆ ಎಂದರೇ ಬಹಳ ಪ್ರೀತಿ ಅವರನ್ನು ಭೇಟಿ ಮಾಡಲು ಹೋದರೆ ಗೌರವದಿಂದ ಕಾಣುತ್ತಿದ್ದರು ಎಂದು ಹೇಳಿದರು.
ನುಡಿ,ನಮನ ಕಾಯಕ್ರಮದಲ್ಲಿ ಸಂಘದ ಕಾರ್ಯದೃಶಿ ನಂಜುಂಡಸ್ವಾಮಿ, ಖಜಾಂಚಿ ಪುಟ್ಟಸ್ವಾಮಿ, ಶಿವಮೂರ್ತಿ, ಕೃಷ್ಣಮೂರ್ತಿ, ಶಂಕರಪ್ಪ, ಈಶ್ವರ, ನಟರಾಜು, ಎಂ.ಡಿ.ಮಹದೇವಯ್ಯ,ನಂಜರಾಜು, ಶಂಕರ್, ಸಿದ್ದರಾಜು, ಬಾಬು, ಜಯರಾಮು, ನಂದಿನಿ, ಮಹದೇವಸ್ವಾಮಿ, ಶ್ರೀಧರ್, ನಂದೀಶ, ಜಯಶ್ರೀ, ಪುಟ್ಟಗೋಪಮ್ಮ ಹಾಗೂ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು.