ಗಣಿತ ಸ್ಪರ್ಧೆಗಳಿಂದ ಮಕ್ಕಳಲ್ಲಿ ಗುಣಾತ್ಮಕ ಕಲಿಕೆಗೆ ಪೂರಕ: ಶೇಖ
ಆಳಂದ:ಸೆ.22: ಶಾಲಾ ಹಂತದಲ್ಲಿ ಮಕ್ಕಳಿಗೆ ಏರ್ಪಡಿಸುವ ಗಣಿತ ಸ್ಪರ್ಧೆಗಳಿಂದ ಗುಣಾತ್ಮಕ ಕಲಿಕೆಗೆ ಪೂರಕವಾಗಿದೆ ಎಂದು ಕಿಣ್ಣಿಸುಲ್ತಾನ ಗ್ರಾಪಂ ಮಾಜಿ ಅಧ್ಯಕ್ಷ ಮಹಿಬೂಬ ಶೇಖ್ ಅವರು ಹೇಳಿದರು.
ತಾಲೂಕಿನ ಕಿಣ್ಣಿಸುಲ್ತಾನ ಗ್ರಾಪಂನಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕರತಾ ಇಲಾಖೆ, ಸಮುದಾಯ ಹಾಗೂ ಆಕರ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಗ್ರಾಮ ಪಂಚಾಯತ ಮಟ್ಟದ ಸರ್ಕಾರಿ ಶಾಲಾ ಮಕ್ಕಳ ಗಣಿತ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣ ಪತ್ರ ನೀಡಿ ಅವರು ಮಾತನಾಡಿದರು.
ಅಧುನಿಕ ಶಿಕ್ಷಣದಲ್ಲಿ ಗಣಿತ ಪ್ರಮುಖ ಪಾತ್ರವಹಿಸುತ್ತಿದೆ. ಹೀಗಾಗಿ ಮಕ್ಕಳಿರುವಾಗಲೇ ಗಣಿತದಲ್ಲಿ ಅಭಿವೃದ್ಧಿ ಪಡಿಸಲು,ಗಣಿತ ವಿಷಯವನ್ನು ಆಸಕ್ತಿದಾಯಕವಾಗಿ ಕಲಿಯುವಂತೆ ಮಾಡುವುದು ಹಾಗೂ ಸಮುದಾಯವು ಸಕ್ರಿಯವಾಗಿ ತೋಡಿಗಿಕೊಳ್ಳಲು ಗಣಿತ ಸ್ಪರ್ಧೆಗಳು ತುಂಬಾ ಸಹಕಾರಿಯಾಗುತ್ತದೆ. ಇಂತಹ ಸ್ಪರ್ಧೆಗಳು ಏರ್ಪಡಿಸುವುದರಿಂದ ಪಾಲಕರು, ಪೋಷಕರು, ಯುವಕರು ಗ್ರಾಮಸ್ಥರು, ಎಸಿಡಿಎಂಸಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಮಕ್ಕಳ ಪ್ರತಿಭೆಗಳನ್ನು ಗ್ರಾಮೀಣ ಭಾಗದಲ್ಲಿ ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗದು ಬಹುಮಾನ ಹಾಗೂ ಅಕ್ಷರ ಫೌಂಡೇಶನ್ ಸಂಸ್ಥೆ ವತಿಯಿಂದ ಪ್ರಮಾಣ ಪತ್ರಗಳು ನೀಡುವದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಇನ್ನೂ ಹೆಚ್ಚಾಗುತ್ತದೆ. ಇತರೆ ಮಕ್ಕಳಲ್ಲಿ ಬಹುಮಾನ ಪಡೆಯಬೇಕೆಂಬ ಕುತೂಹಲ ಮೂಡುತ್ತದೆ ಎಂದರು.
ಈ ಸ್ಪರ್ಧೆಗಳಲ್ಲಿ ಗ್ರಾಮ ಪಂಚಾಯತಿಗೆ ಒಳಪಡುವ ವಿವಿಧ ಗ್ರಾಮದ ಶಾಲೆಗಳಿಂದ 4 ರಿಂದ 6ನೇ ತರಗತಿಯ ವರೆಗೆ ಎಲ್ಲಾ ಮಕ್ಕಳು ವಿಜೇತ ಮಕ್ಕಳಿಗೆ ಬಹುಮಾನ ಪ್ರಮಾಣ ಪತ್ರ ನೀಡಲಾಯಿತು.